ದಾವಣಗೆರೆ, ಏ.1- ಚನ್ನಗಿರಿ ತಾಲ್ಲೂಕು ಕೆರೆಬಿಳಚಿ ಗ್ರಾಮದ ಭದ್ರಾ ಚಾನಲ್ನಲ್ಲಿ ಈಜಲು ಹೋಗಿ ಮೊಹಮದ್ ಸಾಕಿಬ್ ಎಂಬ ಯುವಕ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಈಜು ಬಾರದೇ ಇದ್ದರೂ ಚಾನಲ್ನಲ್ಲಿ
ಇಳಿದಿದ್ದು, ಈಜು ಬಾರದೇ ಮುಳುಗಿ ಮೃತಪಟ್ಟಿದ್ದಾನೆ. ಮೃತನ ಶವವು ಮಾ.31ರ ಭಾನುವಾರ ಬೆಳಿಗ್ಗೆ ಮಲ್ಲಾಪುರದ ಬಳಿಯ ಭದ್ರಾ ಚಾನಲ್ನಲ್ಲಿ ದೊರೆತಿದೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
December 22, 2024