ಮಲೇಬೆನ್ನೂರು, ಮಾ.27- ಇಲ್ಲಿನ ಪುರಸಭೆ ಕಚೇರಿಯ ಆವರಣದಲ್ಲಿ `ಡೇ – ನಲ್ಮ್’ ಯೋಜನೆಯಡಿ ರಚಿಸಲ್ಪಟ್ಟಿರುವ ಸ್ವ-ಸಹಾಯ ಸಂಘದ ಸದಸ್ಯರಿಂದ ಲೋಕಸಭಾ ಚುನಾವಣೆ – 2024ರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತದಾನ ಜಾಗೃತಿಯ ಅರಿವು ಮೂಡಿಸುವ ಸಲುವಾಗಿ ಬುಧವಾರ ರಂಗೋಲಿ ಬಿಡಿಸುವ ಮೂಲಕ ಮತದಾನದ ಜಾಗೃತಿಯ ಬಗ್ಗೆ ವಿವಿಧ ಘೋಷವಾಕ್ಯಗಳೊಂದಿಗೆ ಕಾರ್ಯಕ್ರಮ ನಡೆಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಅಧಿಕಾರಿಗಳಾದ ದಿನಕರ್, ಪ್ರಭು, ಉಮೇಶ್, ನವೀನ್, ಶಿವರಾಜ್, ಮಂಜುನಾಥ್ ಹಾಗೂ ಸಿಬ್ಬಂದಿ ವರ್ಗದವರು ಈ ವೇಳೆ ಹಾಜರಿದ್ದು ರಂಗೋಲಿ ಬಿಡಿಸಿದವರಿಗೆ ಬಹುಮಾನ ವಿತರಿಸಿದರು.
March 13, 2025