ಭಾವಸಾರ ವಿಷನ್ ಇಂಡಿಯಾ ದಾವಣಗೆರೆ ವತಿಯಿಂದ ಮತದಾನದ ಜಾಗೃತಿಯನ್ನು ಪಥ ಸಂಚಲನ ಮೂಲಕ ಇಂದು ಬೆಳಗ್ಗೆ 9 ಗಂಟೆಗೆ ನಗರದಲ್ಲಿ ನಡೆಯಲಿದೆ. ಜನರಿಗೆ ಮತದಾನದ ಅರಿವು, ಮಹತ್ವ ಹಾಗೂ ಜಾಗೃತಿ ಮೂಡಿಸಲು ಈ ಪಥ ಸಂಚಲನ ನಡೆಸುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸರಳ ಅಮಟೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ವಿಧ್ಯುಕ್ತವಾಗಿ ಚಾಲನೆ ನೀಡುವರು. ಪಥ ಸಂಚಲನವು ಬಿ.ಕೆ. ಹಾಸ್ಟೆಲ್ ಜಯದೇವ ಸರ್ಕಲ್ ನಿಂದ ಪ್ರಾರಂಭವಾಗುವುದು ಎಂದು ಕಾರ್ಯದರ್ಶಿ ರಮೇಶ್ ಬಾಬು ಗುಜ್ಜರ್ ತಿಳಿಸಿದ್ದಾರೆ.
March 13, 2025