ದಾವಣಗೆರೆ, ಮಾ.10- ನಗರದ ಜಿ.ಎಂ.ಎಸ್. ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಗಳು ರಾಷ್ಟ್ರ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆಯಲಿರುವ 52ನೇ ರಾಷ್ಟ್ರೀಯ ಸೀನಿಯರ್ ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಎ.ತೇಜಸ್ವಿನಿ ಭಾಗವಹಿಸಲಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ 46ನೇ ರಾಷ್ಟ್ರೀಯ ಜ್ಯೂನಿಯರ್ ಬಾಲಕಿಯರ ವಿಭಾಗದಲ್ಲಿ ಕ್ಷೇಮಾ ಏಂಜಲ್ ಭಾಗವಹಿಸಿದ್ದರು. ರಾಜಸ್ಥಾನದ ಕರೌಲಿಯಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ಬಾಲಕರ ವಿಭಾಗದಲ್ಲಿ ವೈ.ಎಸ್. ರಾಕೇಶ್ ಭಾಗವಹಿಸಿದ್ದರು.