ಭಗೀರಥ ಪೀಠ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿಗಳ 25ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವವು ಇಂದು ಮತ್ತು ನಾಳೆ ನಡೆಯಲಿದೆ.
ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಪುಟ್ಟರಂಗಶೆಟ್ಟಿ ಹಾಗೂ ವಿವಿಧ ಸಚಿವರು, ಸಂಸದರು, ಶಾಸಕರು ಗಣ್ಯರ ಉಪಸ್ಥಿತಿಯಲ್ಲಿ ವಿಶೇಷ ಪೂಜೆ, ಹೋಮ, ಹವನ, ಧಾರ್ಮಿಕ ವಿಧಿ-ವಿಧಾನಗಳು ಜರುಗಲಿವೆ ಎಂದು ಕರ್ನಾಟಕ ರಾಜ್ಯ ಉಪ್ಪಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್ ಚಂದ್ರಪ್ಪ ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಉಚಿತ ಸಾಮೂ ಹಿಕ ವಿವಾಹ, ಸಾಂಸ್ಕೃತಿಕೋತ್ಸವ, ಜಾನಪದ ಕಲಾಮೇಳ, ಭಜನಾ ಮೇಳ, ಧಾರ್ಮಿಕ ಸಮಾ ರಂಭವನ್ನು ಬರಗಾಲದ ಹಿನ್ನೆಲೆಯಲ್ಲಿ ಅರ್ಥ ಪೂರ್ಣವಾಗಿ, ಸರಳವಾಗಿ, ಸಮಾಜಮುಖಿಯಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಉಪ್ಪಾರ ಸಮಾಜದ ಸಂಘಟನೆಯ ಉದ್ದೇಶದಿಂದ ಇದೇ ದಿನಾಂಕ 29 ರಂದು ನವದೆಹಲಿಯ ರಾಮಲೀಲ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.