ದಾವಣಗೆರೆ, ಫೆ. 5- ಕರ್ನಾಟಕ ಜ್ಯೂನಿಯರ್ ಬಾಲಕರ ಬಾಸ್ಕೆಟ್ ಬಾಲ್ ತಂಡಕ್ಕೆ ನಾಯಕರಾಗಿ ದಾವಣಗೆರೆ ಬಾಸ್ಕೆಟ್ ಬಾಲ್ ತಂಡದ ವಿಷ್ಣು ಎನ್.ಎಂ. ಆಯ್ಕೆಯಾಗಿದ್ದಾರೆ. ಬಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಇವರ ಆಶ್ರಯದಲ್ಲಿ ಒಡಿಸಾದ ಭುವನೇಶ್ವರ ನಗರದಲ್ಲಿ ಇದೇ 4 ರಿಂದ 11ರವರೆಗೆ ನಡೆಯಲಿರುವ 73ನೇ ರಾಷ್ಟ್ರೀಯ ಜ್ಯೂನಿಯರ್ (18 ವರ್ಷದೊಳಗಿನ) ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ಜ್ಯೂನಿಯರ್ ಬಾಸ್ಕೆಟ್ ಬಾಲ್ ತಂಡಕ್ಕೆ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್‌ನ ವಿಷ್ಣು ಕರ್ನಾಟಕ ತಂಡದ ನಾಯಕರಾಗಿ ಸ್ಥಾನ ಪಡೆದಿದ್ದಾರೆ.
ವಿಷ್ಣು ಅವರಿಗೆ ಕ್ಲಬ್ಬಿನ ಗೌರವ ಅಧ್ಯಕ್ಷ ಸಿ. ಶ್ರೀರಾಮಮೂರ್ತಿ, ಅಧ್ಯಕ್ಷ ಆರ್. ಕಿರಣ್‌ಕುಮಾರ್, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕ್ಲಬ್ಬಿನ ಉಪಾಧ್ಯಕ್ಷ ಗಡಿಗುಡಾಳ್ ಮಂಜುನಾಥ್, ವಿಜಯಕುಮಾರ್ ಆರ್. ವೀರೇಶ್, ಎಸ್.ಎಲ್. ಪ್ರಸನ್ನ, ಆರ್. ದರ್ಶನ್, ಸಚಿನ್ ಘಾಟ್ಗೆ ಮತ್ತಿತರರು ಶುಭ ಕೋರಿದ್ದಾರೆ.