ದಾವಣಗೆರೆ, ಡಿ.3- ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದಲ್ಲಿ ಬಿಜೆಪಿಗೆ ಕಲಿಸಿದಂತೆ ಕಾಂಗ್ರೆಸ್ ಪಕ್ಷಕ್ಕೂ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಇತರೆ ಸಮುದಾಯಗಳ ಮುಖಂಡರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿ.ಚಂದ್ರನಾಯ್ಕ ಹಾಲೇಕಲ್ಲು, ಕಾಂಗ್ರೆಸ್ ಸರ್ಕಾರವು ನ್ಯಾ. ಸದಾಶಿವ ಆಯೋಗದ ವರದಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಮುನ್ನೆಲೆಗೆ ತರುವುತ್ತಿರುವುದು ಆತಂಕಕಾರಿ. ಇದಕ್ಕೆ 99 ಸಮುದಾಯಗಳ ವಿರೋಧವಿದೆ ಎಂದರು.
99 ಸಮುದಾಯಗಳು ಹಾಗೂ ಸಹೋದರ ಸಮುದಾಯಗಳಾದ ಎಡ ಮತ್ತು ಬಲ ಸಮುದಾಯಗಳನ್ನೂ ಸಹ ಬೀದಿಗೆ ತರಲು ಕಾಂಗ್ರೆಸ್ ಹುನ್ನಾರ ಮಾಡುತ್ತಿದೆ. ಸದಾಶಿವ ಆಯೋಗದ ವರದಿಯನ್ನು ಹಾಗೆಯೇ ಬಿಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ 224 ಶಾಸಕರಿಗೆ ಮನವಿ ನೀಡಲಾಗುವುದು. ನಾಳೆ ದಿನಾಂಕ 4ರ ಸೋಮವಾರ ಜಯದೇವ ವೃತ್ತದಿಂದ ಬೈಕ್ ರಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಸಿ. ಮಂಜುನಾಥ್, ಹೆಚ್.ಜಯಣ್ಣ ಭೋವಿ, ಮಂಜಾನಾಯ್ಕ ತೋಳಹುಣಸೆ, ಹೆಚ್.ಹಾಲೇಶ್ ನಾಯ್ಕ, ಲಿಂಗರಾಜ ನಾಯ್ಕ, ಅನಿಲ್ ಕುಮಾರ್, ಹನುಮೇಶ್, ಗುರುಮೂರ್ತಿ, ಮಂಜುನಾಥ್ ಇತರರಿದ್ದರು.