ಜಿಗಳಿ : ಎನ್ನೆಸ್ಸೆಸ್ ಶಿಬಿರದದಲ್ಲಿ ಡಾ. ಎ.ಬಿ. ರಾಮಚಂದ್ರಪ್ಪ ಅಭಿಮತ
ಮಲೇಬೆನ್ನೂರು, ಡಿ.3- ಹಳ್ಳಿಯ ಜೀವನ ನಿಜವಾದ ಪಠ್ಯವಾಗಿದ್ದು, ಪಠ್ಯದಲ್ಲಿ ಇರದ ನಿಜ ಘಟನೆ, ನಿಜ ಜೀವನ ಹಳ್ಳಿಗಳಲ್ಲಿ ನೀವು ನೋಡಬಹುದೆಂದು ಹರಿಹರದ ಎಸ್‌ಜೆವಿಪಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ವಿದ್ಯಾರ್ಥಿಗಳಿಗೆ ಹೇಳಿದರು.
ಅವರು ಭಾನುವಾರ ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರದ 2ನೇ ದಿನದ ಕಾರ್ಯಕ್ರಮದಲ್ಲಿ `ಆಧುನಿಕ ಸಮಾಜ-ಸವಾಲು ಮತ್ತು ಸಾಧ್ಯತೆಗಳು’ ಕುರಿತು ಮಾತನಾಡಿದರು.
ಹಳ್ಳಿಯ ಸೊಗಡು, ಮಾನವೀಯತೆ, ಮಮತೆ ಮತ್ತು ಕಷ್ಟಗಳನ್ನು ನೋಡುವ ಅವಕಾಶ ಈ ಶಿಬಿರದ ಮೂಲಕ ನಿಮಗೆ ಸಿಕ್ಕಿದೆ. ಹಳ್ಳಿ ಜನರಿಂದ ನೀವು ಕಲಿಯಬೇಕಾಗಿರುವುದು ಬಹಳಷ್ಟು ಇದೆ. ಜೊತೆಗೆ ನೀವು ಕೂಡಾ ಹಳ್ಳಿಯ ಜನರಲ್ಲಿರುವ ಮೌಢ್ಯತೆ ಹೋಗಲಾಡಿಸಿ ಸ್ವಚ್ಛತೆ, ಆರೋಗ್ಯ, ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ದಾಗಿನಕಟ್ಟೆ ವಾಲ್ಮೀಕಿ ಪ್ರೌಢಶಾಲೆಯ ಶಿಕ್ಷಕ ಜಿ.ಆರ್. ನಾಗರಾಜ್, ಬೆಸ್ಕಾಂ ಎಇಇ ಕೆ.ಎಸ್. ಜಯ್ಯಪ್ಪ, ಕಾಲೇಜಿನ ಪ್ರಾಧ್ಯಾಪಕ ಡಾ. ಹೆಚ್. ತಿಪ್ಪೇಸ್ವಾಮಿ ಮಾತನಾಡಿದರು.
ಜಿಗಳಿಯ ಗುರುಧ್ಯಾನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಂ.ಕೆ. ಸ್ವಾಮಿ ಮಾತನಾಡಿ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಅದರಿಂದಲೂ ಉತ್ತಮ ಭವಿಷ್ಯ ಇದೆ. ದುರುಪಯೋಗ ಪಡೆಸಿಕೊಂಡರೆ ಬದುಕು ದಾರಿ ತಪ್ಪುತ್ತದೆ ಎಂದು ಎಚ್ಚರಿಸಿದರು.
ಪತ್ರಕರ್ತ ಹೆಚ್. ಎಂ. ಸದಾನಂದ್, ಶಿಕ್ಷಕ ದೊಡ್ಡಮನಿ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಗ್ರಾಮದ ಮುಖಡ ಜಿ. ಆನಂದಪ್ಪ ಅಧ್ಯಕ್ಷತೆ ವಹಿಸಿದ್ದರು ಗ್ರಾಮದ ಎಂ. ಹಾಲಯ್ಯ, ಬಿ. ಸೋಮಶೇಖರಚಾರಿ, ಭೋವಿ ಮಂಜಣ್ಣ, ಹಾ.ಉ.ಸ. ಸಂಘದ ನಿರ್ದೇಶಕ ಎಂ.ಎಂ. ಸಿದ್ದನಗೌಡ, ಎಸ್‌ಡಿಎಂಸಿ ಅಧ್ಯಕ್ಷ
ಬಿ. ಪ್ರಭಾಕರ್, ಬಾಲಕೇಂದ್ರದ ಅಧ್ಯಕ್ಷ ಜಿ.ಆರ್. ಚಂದ್ರಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಪಿ. ಹನುಮಗೌಡ, ವಿಜಯಭಾಸ್ಕರ್, ಪತ್ರಕರ್ತ ಪ್ರಕಾಶ್, ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಡಾ. ಸಿ. ಚಂದ್ರಶೇಖರ್, ಡಾ. ಬಿ.ಕೆ. ಮಂಜುನಾಥ್, ಕನ್ನಡ ಪ್ರಾಧ್ಯಾಪಕ ಡಾ. ಗಂಗಾಧರ್ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿ ಪ್ರದೀಪ್ ಸ್ವಾಗತಿಸಿದರು. ಪ್ರಿಯಾ ಕಾರ್ಯಕ್ರಮ ನಿರೂಪಿಸಿದರೆ, ಸವಿತಾ ವಂದಿಸಿದರು.