ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದ ಆಶ್ರಯದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ 148 ನೇ ಕದಳಿ ಕಮ್ಮಟದಲ್ಲಿ ದತ್ತಿ ಉಪನ್ಯಾಸ, ಕನ್ನಡ ರಾಜ್ಯೋತ್ಸವ ಹಾಗೂ ಶರಣ ಕೋಲ ಶಾಂತಯ್ಯ ನವರ ಜಯಂತಿ ಕಾರ್ಯಕ್ರಮಗಳು ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್ ವಹಿಸು ವರು. ಮುಖ್ಯ ಅತಿಥಿಯಾಗಿ ಎಸ್. ಪಂಚಾಕ್ಷರಪ್ಪ ಆಗಮಿಸುವರು. ಲಿಂ. ಷಡಾಕ್ಷಷರಪ್ಪ ಮತ್ತು ಅಂಜಿನಮ್ಮ ಬಿ. ಕಲಪನಹಳ್ಳಿ ದತ್ತಿಯನ್ನು ದತ್ತಿದಾನಿಗಳಾದ ಆದರ್ಶ್ ಎಂ.ಎನ್. ಮತ್ತು ತಾಯಿ ಶ್ರೀಮತಿ ಮಮತಾ ನಾಗರಾಜ್ ಅವರಿಂದ ದತ್ತಿ ಉಪನ್ಯಾಸ ನಡೆಯಲಿದೆ. ಉಪನ್ಯಾಸಕರಾದ ಶ್ರೀಮತಿ ಪಿ.ಎಚ್. ಶಾಂತಲಾ ಅವರು ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ವಿಚಾರವಾಗಿ ಉಪನ್ಯಾಸ ನೀಡುವರು. ಕಾರ್ಯಕ್ರಮಕ್ಕೆ ಕೆ.ಬಿ. ಪರಮೇಶ್ವರಪ್ಪ, ವಿನೋದ ಅಜಗಣ್ಣನವರ್ ಶುಭ ಕೋರಿದ್ದಾರೆ.