ಕನ್ನಡ ಭಾಷಾ ಉಪನ್ಯಾಸಕರಿಗೆ ‘ಕನ್ನಡ ಪಠ್ಯ ಪುನರ್ಮನನ’

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌  ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭಾಷಾ ಉಪನ್ಯಾಸಕರುಗಳಿಗೆ  ‘ಕನ್ನಡ ಪಠ್ಯ ಪುನರ್ಮನನ ಕಾರ್ಯಾಗಾರ’ವು  ಕುವೆಂಪು ಕನ್ನಡ ಭವನದಲ್ಲಿ   ಇಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ನಡೆಯಲಿದೆ. ಕರಿಸಿದ್ದಪ್ಪ ಎಸ್ ಜಿ. ಉಪ ನಿರ್ದೇಶಕರು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಇವರು ಕಾರ್ಯಾಗಾರ ಉದ್ಘಾಟಿಸುವರು. ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಎಸ್‌.ಎಂ ಗಂಗಪ್ಪಳವರ್  ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯ ಗೌರವಾಧ್ಯಕ್ಷ ಪಿ. ನಾಗಪ್ಪ ಇವರು ಪ್ರಾಸ್ತಾವಿಕ ನುಡಿಯುವರು.

 ಮುಖ್ಯ ಅತಿಥಿಗಳಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಬಿ. ವಾಮದೇವಪ್ಪ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಆರ್, ಅರಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಎಚ್. ಮಂಜುನಾಥ ರೆಡ್ಡಿ, ಜಗಳೂರು ನಳಂದ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸಿ.ತಿಪ್ಪೇಸ್ವಾಮಿ, ಕರಾಪಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಸಿ. ಬಿ. ರವಿ, ಆರ್. ಜಿ. ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಆರ್ ಗಾಂಧಿ, ನಿವೃತ್ತ ಪ್ರಾಚಾರ್ಯ ಸಿ. ಕೆ. ತಮ್ಮಣ್ಣ ಮುಖ್ಯ ಅತಿಥಿಗಳಾಗಿದ್ದಾರೆ.

ಕಾರ್ಯಕ್ರಮದಲ್ಲಿ ಗೀತಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಮಾಂಜನೇಯ ಎಸ್,  ಸರ್.ಎಂ.ವಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದೇವರಾಜ. ಮ. ಸರಾಪದ, ಕನ್ನಡ ಉಪನ್ಯಾಸಕರ ವೇದಿಕೆಯ ಖಜಾಂಚಿ ಪ್ರದೀಪ ಕೆ. ವಿ. ಕಾರಂತ್ ಉಪಸ್ಥಿತರಿರುವರು.

ಜಿ. ವೆಂಕಟೇಶ್ ರೆಡ್ಡಿ ನಿವೃತ್ತ ಕನ್ನಡ ಉಪನ್ಯಾಸಕರು, ಮಾಲತಿ ಪದವಿ ಪೂರ್ವ ಕಾಲೇಜು, ಜಗಳೂರು, ಹಾಗೂ ವಾಮದೇವಪ್ಪ, ನಿವೃತ್ತ  ಕನ್ನಡ ಉಪನ್ಯಾಸಕರು, ಸರ್ಕಾರಿ ಪದವಿ ಪೂರ್ವ ಕಾಲೇಜು ಅರಸಾಪುರ ಅವರನ್ನು ಸನ್ಮಾನಿಸಲಾಗುವುದು.

error: Content is protected !!