ದಾವಣಗೆರೆ, ನ. 20 – ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮವು ವಿವಿಧ ಯೋಜನೆಗಳಿಗೆ ಆನ್‍ಲೈನ್‍ನಿಂದ ಸುವಿಧಾ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಫಲಾಪೇಕ್ಷಿಗಳು http://sevasindu.karnataka.gov.in ವೆಬ್ ಸೈಟ್‍ನಲ್ಲಿ ಇದೇ ದಿನಾಂಕ 29 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮ ಜಿಲ್ಲಾ ವ್ಯವಸ್ಥಾಪಕರನ್ನು ಅಥವಾ ದೂ.ಸಂ:08192-233309ನ್ನು ಸಂಪರ್ಕಿಸಲು ನಿಗಮದ ವ್ಯವಸ್ಥಾಪಕರಾದ ಬೇಬಿ ಸುನೀತಾ ತಿಳಿಸಿದ್ದಾರೆ.