ಹರಿಹರ, ನ.19- ಭಾರತ ಸರ್ಕಾರದ ಹೊಸ ಪಿ.ಎಂ. ವಿಶ್ವಕರ್ಮ ಯೋಜನೆಯನ್ನು ದಿನಾಂಕ 17-9-23 ರಿಂದ ಜಾರಿಗೊಳಿಸಿದ್ದು, ಗ್ರಾಮ ಪಂಚಾಯತಿ ಮತ್ತು ನಗರ ಮಟ್ಟದಿಂದ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕುಶಲಕರ್ಮಿಗಳು http;//pmvishwarkarama.gov.in ವೆಬ್ ಸೈಟ್‌ನಲ್ಲಿ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ಪೌರಾಯುಕ್ತ ಐಗೂರು ಬಸವರಾಜ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಮೊದಲ ಬಾರಿಗೆ 1 ಲಕ್ಷ ಸಾಲ,18 ತಿಂಗಳೊಳಗೆ 1 ಲಕ್ಷ ಹಿಂತಿರುಗಿಸಿದರೆ 2 ಲಕ್ಷ ಸಾಲವನ್ನು ಶೇ 5 ರಷ್ಟು ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದು, ಬ್ಯಾಂಕ್ ಗ್ಯಾರಂಟಿ ಇಲ್ಲ, ಜಿಎಸ್‌ಟಿ ನೋಂದಾಯಿತ ಅಂಗಡಿಗಳಲ್ಲಿ ಉಪಕರಣಗಳನ್ನು ಖರೀದಿಸಲು15 ಸಾವಿರ, 5 ದಿನಗಳ ತರಬೇತಿ ಇರುತ್ತದೆ.
ಬಡಿಗೆ ವೃತ್ತಿ, ದೋಣಿ ತಯಾರಿಸುವವರು, ಶಸ್ತ್ರ ತಯಾರಕರು, ಕಮ್ಮಾರ ವೃತ್ತಿ, ಕಲ್ಲುಕುಟಿಗ ವೃತ್ತಿ , ಬಟ್ಟೆ, ಚಾಪೆ, ಕಸ ಪೊರಕೆ ತಯಾರಕರು. ಗೊಂಬೆ, ಆಟಿಕೆ ತಯಾರಕರು, ಕ್ಷೌರಿಕ ವೃತ್ತಿ ಮಾಡುವವರು, ಸುತ್ತಿಗೆ, ಹೂಮಾಲೆ ತಯಾರಕರು, ಅಗಸರು, ಆಭರಣ ತಯಾರಕರು.
ಶಿಂಪಿಗೆ ಬಟ್ಟೆ ಹೊಲೆಯುವವರು, ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ ಮೂರ್ತಿ ಕಲ್ಲಿನ ಕೆತ್ತನೆ, ಚಮ್ಮಾರ ಪಾದರಕ್ಷೆ, ಬೀಗ ತಯಾರಕರು, ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ, ದೂರವಾಣಿ ಸಂಖ್ಯೆ, ಇಮೇಲ್ ಐಡಿ, ಭಾವಚಿತ್ರ ವೃತ್ತಿಪರ ದಾಖಲೆ, ಬ್ಯಾಂಕ್ ಖಾತೆ, ಜಾತಿ-ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯವಿರುವ ದಾಖಲೆಗಳನ್ನು ಕೊಟ್ಟು ಯೋಜನೆಯ ಲಾಭವನ್ನು ಪಡೆಯಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.