ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಇಂದು ಮಕ್ಕಳ ಮೇಳವನ್ನು ಇಂದು ಸಂಜೆ 5.30 ಕ್ಕೆ ವನಿತಾ ಸಮಾಜದ ಶ್ರೀ ಸತ್ಯಸಾಯಿ ರಂಗಮಂದಿ ರದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಡಾ. ಶುಕ್ಲಾ ಶೆಟ್ಟಿ ಆಗಮಿ ಸುವರು. ಶ್ರೀಮತಿ ಸಿ. ನಾಗಮ್ಮ ಕೇಶವ ಮೂರ್ತಿ ಉಪಸ್ಥಿತರಿರುವರು. ಅಧ್ಯಕ್ಷತೆ ಯನ್ನು ವರ್ಷದ ಉತ್ತಮ ಪ್ರೌಢಶಾಲೆ ವಿದ್ಯಾರ್ಥಿ ಪುರಸ್ಕೃತರಾದ ಕು. ವಸುಂ ಧರಾ ಹೆಗಡೆ ವಹಿಸುವರು. ಚಂದ್ರಯಾನ ಮಿಷನ್ ವಿಷಯ ಕುರಿತು ಪ್ರಬಂಧ ಸ್ಪರ್ಧೆ, ಜಾನಪದ ಗೀತಗಾಯನ, 10ನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರೌಢ ಶಾಲಾ ವಿದ್ಯಾರ್ಥಿ ಆಯ್ಕೆ ಹಾಗೂ ಸ್ಥಳದ ಲ್ಲೇ ಚಿತ್ರ ಬಿಡಿಸುವುದು ಹಾಗೂ `ಕಸದಿಂದ ರಸ’ ಕಾರ್ಯಕ್ರಮ ನಡೆಯುವುದು.
March 13, 2025