ನ್ಯಾಮತಿ, ನ. 10 – ಬೆಂಗಳೂರಿನ ನಾಗರಬಾವಿಯಲ್ಲಿ ಇಂಜಿನಿಯರಿಂಗ್ ಆಗಿ ನೆಲೆಸಿರುವ ತಾಲ್ಲೂಕಿನ ಟಿ. ಗೋಪಗೊಂಡನಹಳ್ಳಿ ಗ್ರಾಮದ ಜಿ.ಎನ್. ನಯನಾ ಎಂಬುವವರು ಪಾರ್ಟ್‍ಟೈಮ್ ಕೆಲಸದ ಆಮಿಷಕ್ಕೆ ಒಳಗಾಗಿ ಸುಮಾರು 3.50 ಲಕ್ಷ ರೂ. ಕಳೆದುಕೊಂಡಿದ್ದು, ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಾಟ್ಸ್‍ಆಪ್‍ನಲ್ಲಿ ಮೆಸೇಜ್ ಕಳುಹಿಸಿದ ವಂಚಕರು, ದಿನಕ್ಕೆ 3 ಸಾವಿರದಿಂದ ರೂ 8 ಸಾವಿರದ ವರೆಗೆ ಆದಾಯ ಗಳಿಸಬಹುದೆಂದು ನಂಬಿಸುವ ಮೂಲಕ ಮಹಿಳೆಯಿಂದ ಹಣ ಲಪಟಾಯಿಸಿದ್ದಾರೆ.
ಟೆಲಿಗ್ರಾಂ ಆಪ್‍ನಲ್ಲಿ ಜಾಬ್ ಲಿಂಕ್ ಕಳುಹಿಸಿ ವಂಚಕರು, ಕೆಲವು ಟಾಸ್ಕ್‍ಗಳನ್ನು ಪೂರ್ಣ ಗೊಳಿಸಿದರೆ ಕಮೀಷನ್ ಬರುತ್ತದೆಂದು ನಂಬಿಸಿದ್ದಾರೆ. ಅದರಂತೆ ಟಾಸ್ಕ್ ಪೂರೈಸಿದ ಮೇಲೆ ಕಮೀಷನ್ ಬಂದಿದೆ ಎಂದು ತೋರಿಸಿ ನಂತರ ಟಾಸ್ಕ್ ಕೊಟ್ಟು ಹಂತ ಹಂತವಗಿ ಕಮೀಷನ್ ಬರುವುದೆಂದು ಹಣವನ್ನು ಪಡೆದು ವಂಚಿಸಿದ್ದಾರೆ.