ದುರಂತ ಸಾವನ್ನಪ್ಪಿದ ಮಹಾತ್ಮ ಗಾಂಧೀಜಿ ಪುತ್ರ

ಕ್ರಾಂತಿಕಾರಿಗಳ ಪ್ರಾಣ ಉಳಿಸಲು ಕ್ಷಮಾದಾನ ಪತ್ರಕ್ಕೆ ಒಪ್ಪದ ಬಾಪೂಜಿ

ದಾವಣಗೆರೆ, ಅ. 2 – ಕ್ರಾಂತಿಕಾರಿಗಳಾದ ಚಂದ್ರಶೇಖರ ಆಜಾದ್, ಸುಖದೇವ್ ಹಾಗೂ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲು ಬ್ರಿಟಿಷ್ ಸರ್ಕಾರ ಆದೇಶ ಹೊರಡಿಸಿತ್ತು. ಮಹಾತ್ಮ ಗಾಂಧೀಜಿ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಕ್ಷಮಾದಾನ ಪತ್ರ ಬಂದರೆ ಅವರನ್ನು ಬಿಡುವುದಾಗಿ ತಿಳಿಸಲಾಗಿತ್ತು. ಆದರೆ, ಗಾಂಧೀಜಿ ಕ್ಷಮಾದಾನದ ಪತ್ರಕ್ಕೆ ಒಪ್ಪಲಿಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಿ.ಎಸ್.ಉಜ್ಜಿನಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರ ಪಾಲಿಕೆ ಹಾಗೂ ವಾರ್ತಾ ಇಲಾಖೆಗಳ ಸಂಯು ಕ್ತಾಶ್ರಯದಲ್ಲಿ ಗಾಂಧಿ ಭವನದಲ್ಲಿ  ಆಯೋಜಿಸ ಲಾಗಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕ್ಷಮಾದಾನಕ್ಕಾಗಿ ಗಾಂಧೀಜಿ ಪತ್ರ ಬರೆಯಲು ನಿರಾಕರಿಸಿದ್ದು, ಈಗಲೂ ನನಗೆ ಕಾಡುವ ಪ್ರಶ್ನೆಯಾಗಿದೆ ಎಂದವರು ಹೇಳಿದರು.

ತಮ್ಮ ಹಿರಿಯ ಮಗ ಹರಿಲಾಲ್ ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡಲು ಗಾಂಧೀಜಿ ಅನುಮತಿ ನೀಡಲಿಲ್ಲ. ಇದರಿಂದ ಹರಿಲಾಲ್ ತೀವ್ರ ಬೇಸರಗೊಂಡ. ನಂತರ ಮತಾಂತರವಾದ, ಬೇರೆ ಜಾತಿ ಹುಡುಗಿಯ ಮದುವೆಯಾದ, ಕುಡಿಯುವುದು ಕಲಿತ. ಗಾಂಧೀಜಿ ವಿರುದ್ಧ ನೂರಾರು ಪ್ರಕಟಣೆ ಹೊರಡಿಸಿದ ಎಂದು ಉಜ್ಜಿನಪ್ಪ ಹೇಳಿದರು.

ಗಾಂಧೀಜಿ ಅವರ ಪತ್ನಿ ಕಸ್ತೂರಿಬಾ ಅವರು ಪುತ್ರನ ಪರಿಸ್ಥಿತಿ ನೋಡಿ ಚಡಪಡಿಸುತ್ತಿದ್ದರು. ಆದರೆ, ಅವರ ಬಗ್ಗೆ ಯಾರೂ ಮಾತನಾಡುವಂತಿ ರಲಿಲ್ಲ.  ಹರಿಲಾಲ್ ಕೊನೆಗೆ ದುರಂತ ಸಾವನ್ನ ಪ್ಪಿದ ಎಂದು ತಿಳಿಸಿದರು. ಸ್ವಾತಂತ್ರ್ಯ ಹೋರಾಟ ದಲ್ಲಿ ಬಂಧಿತರಾದ ನೂರಾರು ಜನರನ್ನು ಅಂಡ ಮಾನ್ ಜೈಲಿನಲ್ಲಿ ತೀವ್ರ ಹಿಂಸೆಗೆ ಗುರಿ ಮಾಡ ಲಾಗಿತ್ತು. ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಹೋ ರಾಟ ಸ್ಮರಿಸುವ ವೇಳೆಗೆ ಈ ಹೋರಾಟ ಗಾರರು, ಕ್ರಾಂತಿಕಾರಿಗಳನ್ನೂ ಸ್ಮರಿಸಬೇಕು ಎಂದರು.

error: Content is protected !!