ವಿನೂತನ ಮಹಿಳಾ ಸಮಾಜದ ವತಿಯಿಂದ ಇಂದು ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುವುದು ಎಂದು ಸಮಾಜದ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಮಂಜುನಾಥ್ ತಿಳಿಸಿದ್ದಾರೆ.
ನಗರ ಹಾಗೂ ಸುತ್ತಮುತ್ತಲಿನ 60 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರಿಗೆ ಆಟಗಳನ್ನು ಆಡಿಸಲಾಗುವುದು. ಶ್ರೀಮತಿ ಡಾ. ಶಾಂತಾ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಮಾಹಿತಿಗಾಗಿ ಹೇಮಾ ಜಿ. ಶೇಟ್ (87623 91940), ಪುಷ್ಪಾ ಬಸವರಾಜ್ (9481670455) ಇವರನ್ನು ಸಂಪರ್ಕಿಸಬಹುದಾಗಿದೆ.