ರಾಜ್ಯಮಟ್ಟದ ಖೋ-ಖೋ ಮತ್ತು ಕಬಡ್ಡಿಗೆ ಅತ್ತಿಗೆರೆ ಕಾಲೇಜು ವಿದ್ಯಾರ್ಥಿಗಳು

ದಾವಣಗೆರೆ, ಅ. 1- ಸಮೀಪದ ಅತ್ತಿಗೆರೆಯ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಎ.ಎಂ. ಲೀಲಾವತಿ ರಾಜ್ಯಮಟ್ಟದ ಖೋ-ಖೋ ಟೀಂಗೆ ಹಾಗೂ ಕು. ಹೆಚ್.ಟಿ. ರಮ್ಯಾ ರಾಜ್ಯಮಟ್ಟದ ಕಬಡ್ಡಿ ಟೀಂಗೆ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಚನ್ನಪ್ಪ ಪಲ್ಲಾಗಟ್ಟೆ, ಕಾರ್ಯದರ್ಶಿ ಪ್ರೊ. ಕೆ.ಆರ್. ಸಿದ್ದಪ್ಪ ಹಾಗೂ ಕಾಲೇಜಿನ ಪ್ರಾಚಾರ್ಯ ಹೆಚ್. ಚಂದ್ರಪ್ಪ ಮತ್ತು ಕ್ರೀಡಾ ಕಾರ್ಯದರ್ಶಿ ಸುಭಾಷ್ ಹಾಗೂ ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.

error: Content is protected !!