ಭ್ರಷ್ಟಾಚಾರ: ಡಿಸಿ, ಸಿಇಓ ವಿರುದ್ಧ ಲೋಕಾಯುಕ್ತಕ್ಕೆ ದೂರು

ದಾವಣಗೆರೆ, ಅ. 1- ಇಡೀ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದ್ದು, ಸರ್ಕಾರಿ ಇಲಾಖೆ ಅಧಿಕಾರಿಗಳು ಫಲಾನುಭವಿಗಳಿಂದ ನೇರವಾಗಿ ಲಂಚದ ಬೇಡಿಕೆ ಇಡುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವ ಹಣಾಧಿಕಾರಿಗಳು ಅಧಿಕಾರಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕೆಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಲಂಚದ ಹಾವಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ಮೇಲಾಧಿಕಾರಿಗಳಿಗೆ ನೀಡುವ ಕುರಿತು ಲಂಚ ಪಡೆದ ಅಧಿಕಾರಿಗಳು ಹೇಳುತ್ತಿರುವುದನ್ನು ಗಮನಿಸಿದರೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಕೂಡ ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಡಿಸಿ, ಸಿಇಓ ವಿರುದ್ದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

ಮಹಾನಗರ ಪಾಲಿಕೆ 42 ನೇ ವಾರ್ಡಿನ ಸದಸ್ಯೆ ಗೌರಮ್ಮ ಗಿರೀಶ್ ಅವರ ಅಳಿಯ ಎನ್. ರವಿ ಅವರು ಹರಿಹರ ತಾಲ್ಲೂಕಿನ ಕಾರ್ಯನಿ ರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಜೊತೆ ಸಾರಥಿ ಪಿಡಿಓ ರಾಘವೇಂದ್ರ ಅವರು, ಹರಿಹರ ತಾಲ್ಲೂಕಿನ ಸಲಗನಹಳ್ಳಿ ಗ್ರಾಮದಲ್ಲಿ ಒಂದು ಎಕರೆ ಜಮೀನನ್ನು ಸೈಟ್ ಪ್ಲಾನ್ ಮಾಡಿಕೊಡಲು 1.50 ಲಕ್ಷ ಹಣದ ಬೇಡಿಕೆ ಇಟ್ಟಿದ್ದು, ಈ ಕುರಿತು ಲೋಕಾಯುಕ್ತ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಜಿ. ರಾಹುಲ್, ಸಾಗರ್, ಅನಿಲ್ ಸುರ್ವೆ, ಶ್ರೀಧರ್, ಶ್ರೀಧರ್ ಕಮ್ಮಾರ್, ಅಜಯ್, ಪಳನಿ, ಆರ್.ವಿ. ವಿನಯ್, ಶ್ರೀನಿವಾಸ್, ಭರತ್ ಮತ್ತಿತತರರು ಇದ್ದರು. 

error: Content is protected !!