ದಾವಣಗೆರೆ ಚಿತ್ರಕಲಾ ಪರಿಷತ್ ಹಾಗೂ ಹಿಂದೂ ಯುವ ಶಕ್ತಿ ಇವರುಗಳ ಸಹಯೋಗದೊಂದಿಗೆ `ವರ್ಣ ಗಣೇಶ’ ಚಿತ್ರಕಲಾ ಪ್ರದರ್ಶನವನ್ನು ಇಂದು ಸಂಜೆ 5.30 ಕ್ಕೆ ತೊಗಟವೀರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಬಿ.ಜಿ. ಅಜಯ್ಕುಮಾರ್ ವಹಿಸುವರು. ಕಾರ್ಯಕ್ರಮವನ್ನು ಜಿ.ಎಸ್. ಅನಿತ್ಕುಮಾರ್ ಉದ್ಘಾಟಿಸುವರು. ಅತಿಥಿಗಳಾಗಿ ಲೋಕಿಕೆರೆ ನಾಗರಾಜ್, ಡಿ.ಡಿ. ಬಸವರಾಜ್, ಪಿ.ಸಿ. ಮಹಾಬಲೇಶ್ವರ ಆಗಮಿಸುವರು.
January 23, 2025