ನಿಟುವಳ್ಳಿಯಲ್ಲಿ ವಿನಾಯಕೋತ್ಸವ

ದಾವಣಗೆರೆ – ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ ಆಶ್ರಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಗಣೇಶೋತ್ಸವ ನಡೆಯಲಿದೆ. ಇಂದು ಮಧ್ಯಾಹ್ನ 12.40 ಕ್ಕೆ ಶ್ರೀ ವಿನಾಯಕ ಸ್ವಾಮಿಯನ್ನು ಪ್ರತಿಷ್ಟಾಪಿಸಲಾಗು ವುದು. ರಾತ್ರಿ 7 ಗಂಟೆಗೆ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಯವರಿಂದ ಭಜನೆ ನಡೆಯು ವುದು. ನಾಳೆ ಮಂಗಳವಾರದಿಂದ ಮೂರು ದಿನ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಮತ್ತು ಸಂಜೆ 6.30 ಕ್ಕೆ ಪೂಜಾ ಸೇವೆಗಳು ನಡೆಯುವವು.

error: Content is protected !!