ದಾವಣಗೆರೆ, ಆ.22- ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಮಹಾನಗರ ಪಾಲಿಕೆ ಹಾಗೂ ಗ್ರಾಮಗಳ ಕೃಷಿ ಜಮೀನು ಮತ್ತು ವಸತಿ ನಿವೇಶನಗಳ ಆಸ್ತಿ ದರಗಳ ಮಾರ್ಗಸೂಚಿ ಪ್ರಸಕ್ತ ಸಾಲಿಗೆ ದರಗಳನ್ನು ಪರಿಷ್ಕರಣೆಗೊಳಿಸಲಾಗಿದೆ. ವರದಿ ಪ್ರಕಟಣೆಗೊಂಡ ದಿನಾಂಕ ದಿಂದ 15 ದಿವಸಗಳ ಒಳಗಾಗಿ ಸಾರ್ವ ಜನಿಕರಿಂದ ಆಕ್ಷೇಪಣೆ, ಸಲಹೆ, ಸೂಚನೆ ಗಳು ದಾಖ ಲಾತಿಗಳ ಆಧಾರದ ಮೇಲೆ ಸಕಾರಣ ದೊಂದಿಗೆ ತಮ್ಮ ಅಹವಾಲು ಗಳನ್ನು ಲಿಖಿತ ರೂಪದಲ್ಲಿ ಸದಸ್ಯ ಕಾ ರ್ಯದರ್ಶಿಗಳು, ಮಾರ್ಗಸೂಚಿ ಮೌಲ್ಯ ಮಾಪನ ಉಪ ಸಮಿತಿ ಹಾಗೂ ಉಪ ನೋಂದಣಾಧಿಕಾರಿ, ಉಪನೋಂದಣಿ ಕಛೇರಿ, ಏಕಾ ಟವರ್, ಪಿಬಿ ರಸ್ತೆ ದಾವಣಗೆರೆಗೆ ಸಲ್ಲಿಸಲು ಕೋರಲಾಗಿದೆ.
January 15, 2025