ಕೊಂಡಜ್ಜಿಯ ಓಶೋ ಧ್ಯಾನ ಶಾಲಾ ಆವರಣ ದಲ್ಲಿ ಭಾರತ ವಿಕಾಸ ಪರಿಷದ್, ಗೌತಮ ಶಾಖೆ ಹಾಗೂ ಓಶೋ ಧ್ಯಾನ ಶಾಲಾ ಸಂಯುಕ್ತಾಶ್ರ ಯದಲ್ಲಿ ಇಂದು ಬೆಳಿಗ್ಗೆ 8 ರಿಂದ 10ರವರೆಗೆ ವಿವಿಧ ಬಗೆಯ ಹಣ್ಣಿನ ಸಸಿಗಳು, ಹೂವಿನ ಸಸಿಗಳು, ನೆರಳಿನ ಸಸಿಗಳು, ಔಷಧೀಯ ಸಸಿಗಳು ಹಾಗೂ ಪ್ರಾಣಿ – ಪಕ್ಷಿಗಳಿಗೆ ಉಪಯುಕ್ತವಾಗುವ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುವುದು.
ಭಾರತ ವಿಕಾಸ ಪರಿಷದ್ ಅಧ್ಯಕ್ಷ ಡಾ. ಪ್ರಸಾದ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. 2023ನೇ ಪರಿಸರ ವರ್ಷದ ಧ್ಯೇಯ ವಾಕ್ಯವಾದ `ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ’ ವಿಷಯವಾಗಿ ಡಾ. ವಿವೇಕ್ ಜಿ.ಭಿಡೆ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಂದರ್ ರಾಜ್, ಬಿ.ಕೆ ತಿಪ್ಪೇಸ್ವಾಮಿ, ಟಿ.ಎಸ್. ಜಯರುದ್ರೇಶ್ ಮತ್ತು ಇತರರು ಉಪಸ್ಥಿತರಿರುವರು.