ದಾವಣಗೆರೆ, ಜೂ.1- ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿರುವ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿ ಮಾಯಕೊಂಡ ಗ್ರಾಮದ ನಾಗರಾಜ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್ ಅವರು ಅಪರಾಧಿ ನಾಗರಾಜನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನಾಗರಾಜ ತನ್ನ ಪತ್ನಿಯ ಶೀಲ ಶಂಕಿಸಿ 19.4.2018 ರಂದು ಬೆಳಗಿನ ಜಾವ ಪತ್ನಿ ಶಿಲ್ಪಾ ಮತ್ತು ಎರಡು ವರ್ಷದ ಕೃತಿಕಾ ಎಂಬ ಮಗಳನ್ನು ಕೊಲೆ ಮಾಡಿದ ಆರೋಪಕ್ಕೆ ಒಳಗಾಗಿದ್ದ. ಅಂದಿನ ತನಿಖಾಧಿಕಾರಿ ಗುರುಬಸವರಾಜ್ ತನಿಖೆ ಮಾಡಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯಪ್ಪ ಕೆ.ಜಿ ವಾದ ಮಂಡಿಸಿದ್ದರು.
January 16, 2025