ದಾವಣಗೆರೆ, ಜೂ. 1- ನಗರದ ವಿನೋಬನಗರ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋ ತ್ಸವ ಕಾರ್ಯಕ್ರಮ ನಡೆಸಲಾಯಿತು. ಶಾಲಾ ಮುಖ್ಯಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಪೋಷಕರು ಶಾಲಾ ವಿದ್ಯಾರ್ಥಿ ಗಳಿಗೆ ಆರತಿ ಬೆಳಗುವ ಮೂಲಕ ಕಾರ್ಯ ಕ್ರಮ ಉದ್ಘಾಟಿಸಿದರು. ದಾನಿಗಳಾದ ಟಿ.ಎಸ್. ನಾಗರಾಜ್ ಮಕ್ಕಳಿಗೆ ಸಿಹಿ ವಿತರಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಮುಖ್ಯೋಪಾಧ್ಯಾಯರಾದ ಎಸ್. ಶೋಭಾ ಎಸ್ಡಿಎಂಸಿ ಸಮಿತಿಯ ಉಮಾ ಕೆ., ರುದ್ರಪ್ಪ, ಕವಿತ, ಶೃತಿ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
January 16, 2025