ದಾವಣಗೆರೆ, ಜೂ.1- ಪ್ರಾಣಿಯೊಂದು ಅಡ್ಡ ಬಂದ ಕಾರಣಕ್ಕಾಗಿ ವೇಗವಾಗಿ ಚಲಿಸುತ್ತಿದ್ದ ಬಸ್ಗೆ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿ ಘಟನೆ ನ್ಯಾಮತಿ ತಾಲ್ಲೂಕು ಕುಂಕುವರಸ್ತೆಯಲ್ಲಿ ಜರುಗಿದೆ.
ಕುಟುಂಬ ನಾಲ್ವರು ಪ್ರವಾಸ ಮುಗಿಸಿಕೊಂಡು ಎಸ್.ಆರ್.ಎಂ.ಎಸ್. ಬಸ್ನಲ್ಲಿ ವಾಪಾಸ್ ಬರುವಾಗ ಕುಂಕುವ ರಸ್ತೆಯಲ್ಲಿ ಬಸ್ ಬ್ರೇಕೇ ಹಾಕಿದ್ದರಿಂದ ಬಸ್ನಲ್ಲಿರುವ ಕಂಬಿ ಎದೆ ಹಾಗೂ ಮುಖಕ್ಕೆ ಬಡಿದದ್ದರಿಂದ ಮೂಗಿನಿಂದ ರಕ್ತ ಸುರಿದ ಸ್ಥಳದಲ್ಲಿಯೇ ಶಶಿಕುಮಾರ (28) ಮೃತಪ್ಟಟಿದ್ದಾನೆ. ಈ ಕುರಿತು ಮೃತರ ತಂದೆ ಗಣೇಶ್ ನಾಯ್ಕ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.