ಹೊನ್ನಾಳಿ, ಮೇ 30- ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವೀರಶೈವ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭವು ಜೂನ್ 4 ರ ಭಾನುವಾರ ಬೆಳಗ್ಗೆ 11 ಗಂಟೆಗೆ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ. ಕೆ. ಬೆನಕಪ್ಪ, ಹಾಲಪ್ಪ ಪಟ್ಟಣಶೆಟ್ಟಿ, ಬೆನಕಪ್ಪ, ಕೆ.ವಿ. ಪ್ರಸನ್ನ, ನಾಗಮ್ಮ ಎಸ್, ವೀರೇಶ್ ಬೆಳಗುತ್ತಿ, ಇಡ್ಲಿ ರುದ್ರಪ್ಪ, ವಿಜಯಮ್ಮ, ಚಂದ್ರಶೇಖರಪ್ಪ ಕುಂಕೋದ ಸನ್ಮಾನ ಸ್ವೀಕರಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕೆ.ಯು. ಮಂಜೇಶ್ವರ, ಜ್ಯೋತಿ ಪ್ರಕಾಶ್, ಮಂಗಳಾ ಎನ್. ನೆರವೇರಿಸಲಿದ್ದು, ಗಣ್ಯರ ಸನ್ಮಾನವನ್ನು ನಾಗನಗೌಡ್ರು, ವಾಣಿಗುರು ನೆರವೇರಿಸಲಿರುವರು.
ಸಮಾರಂಭದ ಅಧ್ಯಕ್ಷತೆಯನ್ನು ವೀರಶೈವ ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷರು ಪಿ.ವೀರಪ್ಪ ವಹಿಸಲಿದ್ದು, ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷರಾದ ಹೆಚ್.ಪಿ. ರಾಜಕುಮಾರ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಪರಮೇಶ್ ಪಟ್ಟಣಶೆಟ್ಟಿ, ಎನ್.ಡಿ. ಪಂಚಾಕ್ಷರಪ್ಪ, ಕಾಶೀನಾಥ್, ಹಾಲೇಶ್ ಕುಂಕೋದ್, ಜಿ. ದೊಡ್ಡಪ್ಪ, ಶಿಲ್ಪಾ ರಾಜುಗೌಡ್ರು, ಹಾಲೇಶ್ ಕೆ.ಎನ್, ಹೆಚ್.ಪಿ. ಗಿರೀಶ್ ಆಗಮಿಸಲಿದ್ದಾರೆ.