ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ದಿಸ್ಟ್ ಸೋಷಿಯಲ್ ಎಜುಕೇಶನಲ್, ಕಲ್ಚ ರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಂದು ಬೆಳಿಗ್ಗೆ 10.30 ಕ್ಕೆ ರೋಟರಿ ಬಾಲಭವ ನದಲ್ಲಿ `ಬುದ್ಡ-ಬಸವ-ಅಂಬೇಡ್ಕರ್’ ಜಯಂತಿ ಹಾಗೂ ಉಚಿತ ಆರೋಗ್ಯ ತಪಾಸನಾ ಶಿಬಿರ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಬಂತೇಜಿ ಬಿಕ್ಕುಣಿ ಬುದ್ಧಮ್ಮ ವಹಿಸುವರು. ಮೈಸೂರಿನ ಉರಿಲಿಂಗಪೆದ್ದಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
`ಪ್ರಸ್ತುತ ದಿನಮಾನಕ್ಕೆ ಬುದ್ಧನ ತತ್ವಗಳ ಅನಿವಾರ್ಯತೆ’ ವಿಷಯ ಕುರಿತು ಪ್ರೊ.ಎ.ಬಿ. ರಾಮಚಂದ್ರಪ್ಪ, `ನಮ್ಮ ಬದುಕಿನಲ್ಲಿ ಬಸವೇಶ್ವರರ ವಚನಗಳ ಪ್ರಾಮುಖ್ಯತೆ’ ಕುರಿತು ಧಾರವಾಡ ಜ್ಞಾನ ಬುದ್ದ ವಿಹಾರದ ಕಾರ್ಯದರ್ಶಿ ಎಫ್.ಹೆಚ್. ಜಕ್ಕಪ್ಪನವರ್ ಉಪನ್ಯಾಸ ನೀಡಲಿದ್ದಾರೆ.
`ಭಾರತೀಯ ಸಮುದಾಯಕ್ಕೆ ಅಂಬೇಡ್ಕರ್ ಕೊಡುಗೆ’ ಕುರಿತು ಡಿ.ಟಿ. ದೇವೇಂದ್ರನ್, `ಭಾರತೀಯ ಸಂವೀಧಾನ ರಚನೆಯಲ್ಲಿ ಬುದ್ಧ ತತ್ವಗಳ ಅಳವಡಿಕೆ’ ಕುರಿತು ಡಾ.ಜಿ.ಟಿ. ಗೋವಿಂದಪ್ಪ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳು : ಎನ್. ರುದ್ರಮುನಿ, ಹೆಚ್.ಕೆ. ಬಸವರಾಜ್, ಎ.ಆರ್. ಮಹದೇವಪ್ಪ, ಆವರಗೆರೆ ರುದ್ರಮುನಿ. ಉಪನ್ಯಾಸ : ದಾವಣಗೆರೆ ವಿಶ್ವವಿದ್ಯಾಲಯದಿಂದ ವಿಪಶ್ಯನ ಧ್ಯಾನ ಕುರಿತು ಉಪನ್ಯಾಸ ಕಾರ್ಯಕ್ರಮ.