ದಾವಣಗೆರೆ, ಮೇ 26- ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಸಂಚಾರಿ, ಅರೆ ಸಂಚಾರಿ ಕುರಿ, ಮೇಕೆ ಸಾಕಾಣಿಕೆ ಗಾರರಿಗೆ ಅವಶ್ಯಕ ಪರಿಕರಗಳನ್ನು ನೀಡಲಾಗುವುದು. ಜಿಲ್ಲೆಗೆ 10 ಕಿಟ್ಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ತಾಲ್ಲೂಕು ನಿಗಮದಲ್ಲಿ ನೋಂದಾ ಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯತ್ವ ಪಡೆದ ಸಾಗಾಣಿಕೆಗಾರರು ಜೂನ್ 5 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.
January 5, 2025