ದಾವಣಗೆರೆ, ಮೇ 25- ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ಐಗೂರು ಶಿವಮೂರ್ತಪ್ಪ ಆಯ್ಕೆಯಾಗಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸಾದ್ ಮತ್ತು ರಾಜ್ಯ ಕಾರ್ಯದರ್ಶಿ ಬಲ್ಲೂರು ಶಿವಕುಮಾರ್ ಅವರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಸಮಿತಿ ಗೌರವಾಧ್ಯಕ್ಷ ರಾಗಿ ಸಿ.ಆರ್.ಭೀಮಾ ನಾಯ್ಕ, ಪ್ರಧಾನ ಕಾರ್ಯಾ ಧ್ಯಕ್ಷರಾಗಿ ನಾಗರ ಕಟ್ಟೆ ಜಯನಾಯ್ಕ, ಉಪಾಧ್ಯಕ್ಷರಾಗಿ ಪ್ರತಾಪ್ ಮಾಯಕೊಂಡ, ಚೌಡಪ್ಪ ನರಗನಹಳ್ಳಿ, ಆವರಗೆರೆ ಕಲ್ಲೇಶಪ್ಪ, ಹನುಮಂತಪ್ಪ ಬಾಡ, ಐಗೂರು ನಾಗರಾಜ್, ಬಿ.ಟಿ.ಕುಮಾರ್ ಬಲ್ಲೂರು, ಸಂಘಟನಾ ಕಾರ್ಯದರ್ಶಿ ಬಿ.ಎಂ.ಚನ್ನೇಶ್ ಅವರುಗಳು ಆಯ್ಕೆಯಾಗಿದ್ದಾರೆ.