ಮಲೇಬೆನ್ನೂರಿನ ರಾಜರಾಜೇಶ್ವರಿ ಶಾಲೆಗೆ ಶೇ.100 ಫಲಿತಾಂಶ

ಮಲೇಬೆನ್ನೂರಿನ ರಾಜರಾಜೇಶ್ವರಿ ಶಾಲೆಗೆ ಶೇ.100 ಫಲಿತಾಂಶ - Janathavaniಮಲೇಬೆನ್ನೂರು,ಮೇ 10-   ಜಿಗಳಿ ರಸ್ತೆಯಲ್ಲಿರುವ  ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆ ಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ದೊರಕಿದೆ.  ಪರೀಕ್ಷೆಗೆ ಕುಳಿತ 24 ವಿದ್ಯಾರ್ಥಿಗಳಲ್ಲಿ ಆರು ಡಿಸ್ಟಿಂಕ್ಷನ್ ಹಾಗೂ 14 ಪ್ರಥಮ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. 

600 ಅಂಕಗಳೊಂದಿಗೆ ಶೇ. 96 % ಫಲಿತಾಂಶ ಪಡೆದಿರುವ ಗೌರಿಕಾ ಜಿ. ಎಸ್. ಎಂಬ ವಿದ್ಯಾರ್ಥಿನಿ ಶಾಲೆಯ ಟಾಪರ್ ಆಗಿದ್ದಾಳೆ.  ರಮ್ಯಾ ಎಸ್. (ಶೇ. 95.04),  ವರ್ಷಾ ಚೌಧರಿ  (ಶೇ .93), ಭುವನ ಓ.ಜಿ.  (ಶೇ. 88.48),  ಅನುಷಾ ಜಿ. ಎಂ. ಹಾಗೂ ಅಭಿರಾಮ್ ಶೇ. 85 ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಕನ್ನಡದಲ್ಲಿ ಗೌರಿಕಾ, ವರ್ಷಾ ಚೌಧರಿ ಹಾಗೂ ಅನುಷಾ 125 ಕ್ಕೆ 125,  ಆಂಗ್ಲ ಭಾಷೆಯಲ್ಲಿ ರಮ್ಯಾ ಹಾಗೂ ಮಮತಾ ಚೌಧರಿ 100 ಕ್ಕೆ 100, ಹಿಂದಿ ವಿಷಯದಲ್ಲಿ ಗೌರಿಕಾ, ವರ್ಷಾ ಚೌಧರಿ, ಸಾನಿಯಾ ಭಾನು ಹಾಗೂ ರಮ್ಯಾ 100 ಕ್ಕೆ 100 ಅಂಕ ಪಡೆದಿದ್ದಾರೆ.

error: Content is protected !!