ದಾವಣಗೆರೆ, ಏ.27- ಹಳೆಬಾತಿ ಗ್ರಾಮದ ಸಿದ್ದಯ್ಯನವರ ಅಡಿಕೆ ತೋಟದ ಪಕ್ಕದಲ್ಲಿರುವ ಕಿರುನಾಲೆ ಹರಿಯುವ ನೀರಿನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.
ಮೂಗು ಇತರೆ ಭಾಗಗಳಲ್ಲಿ ಜಲಚರ ಪ್ರಾಣಿಗಳು ತಿಂದಿರಬಹುದು ಎಂದು ಹೇಳಲಾಗಿದೆ. ಸುಮಾರು 3 ದಿನಗಳ ಹಿಂದೆ ಯಾವಾಗಲೋ ನೀರು ಕುಡಿಯುವುದಕ್ಕೆ ಅಥವಾ ಕೆರೆಯಲ್ಲಿ ಕೈ, ಕಾಲು ತೊಳೆಯಲು ಹೋದಾಗ ಕಾಲು ಜಾರಿ ಚಾನಲ್‌ನಲ್ಲಿ ಬಿದ್ದಿರಬಹುದು ಎಂದು ಊಹಿಸಲಾಗಿದೆ.
ಸಂಬಂಧಪಟ್ಟವರು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : 08192-262555, 9480803256, 08192-253100.