ದಾವಣಗೆರೆ,ಏ. 21- ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸೈನ್ಸ್ಅಕಾಡೆಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.
ಒಟ್ಟು ಶೇ. 96.33 ಫಲಿತಾಂಶದ ಲಭಿಸಿದ್ದು, ಎಂ. ಸೃಷ್ಟಿ 600 ಅಂಕಗಳಿಗೆ 581 (96.83%) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಪವಿತ್ರಾ ದೇವೇಂದ್ರಚಾರ್ ಬಡಿಗೇರ್ (580, 96.67%) ದ್ವಿತೀಯ, ಕೆ.ಸಿ. ಸಂಜನಾ (579, 96.5%) ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಎನ್. ಜಾಹ್ನವಿ (578, 96.33%), ಎಂ.ಎನ್. ನಂದಿನಿ (578, 96.33%) ನಾಲ್ಕನೇ ಸ್ಥಾನ ಹಾಗೂ ಎನ್. ಧೃತಿ (577 96.17%) 5ನೇ ಸ್ಥಾನ ಪಡೆದಿರುತ್ತಾರೆ.
ಉಳಿದಂತೆ ಒಟ್ಟು ಕನ್ನಡ 2, ಹಿಂದಿ 1, ಗಣಿತದಲ್ಲಿ 1 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿರುತ್ತಾರೆ. 63 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 86 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.