ದಾವಣಗೆರೆ,ಏ.16- ಯುಗಾದಿ ಕಳೆದು ತಿಂಗಳಾಗುತ್ತಾ ಬಂದರೂ ನಗರದಲ್ಲಿ ಮಳೆ ಬಾರದೇ ಸೂರ್ಯನ ಪ್ರಖರತೆ ಹೆಚ್ಚಾಗಿ ರಣ-ರಣ ಬಿಸಿಲಲ್ಲಿ ಬೇಯುವಂತಾಗಿದೆ. ಹಿರಿಯ ನಾಗರಿಕರಂತೂ ಬಸವಳಿದಿದ್ದಾರೆ. ಆದಕಾರಣ ವರುಣನ ಕೃಪೆಗಾಗಿ ನಗರದೇವತೆ ದುಗ್ಗಮ್ಮ ತಾಯಿಯ ಮೊರೆಹೋಗಲು ಪದ್ಧತಿಯಂತೆ ಮೂರು ವಾರ ದೇವಸ್ಥಾನದ ಬಳಿ ಸಂತೆ ನಡೆಸಬೇಕು ಎಂದು ಸಾಮಾಜಿಕ ಸೇವಾಕರ್ತ ಜೆ.ಸೋಮನಾಥ್ ಅವರು ಮಹಾನಗರ ಪಾಲಿಕೆ ಅಧ್ಯಕ್ಷರು, ಆಯುಕ್ತರನ್ನು ಕೋರಿದ್ದಾರೆ.
January 9, 2025