ದಾವಣಗೆರೆ, ಮಾ. 27- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯಲ್ಲಿ ಬರುವ ರೈತ ಭವನದ ಆವರಣದಲ್ಲಿ ಲೀಜ್ ಕಂ ಸೇಲ್ ಆಧಾರದ ಮೇಲೆ ವಿವಿಧ ವ್ಯಾಪಾರಿಗಳಿಗೆ ನೋಂದಣಿಯಾದ ನಿವೇಶನ ರದ್ದು ಪಡಿಸದೇ ಮಂಜೂರಾದ ಫಲಾನುಭವಿಗಳಿಗೆ ಒದಗಿಸುವಂತೆ ಹಸಿರು ರೈತ ಹೋರಾಟಗಾರರ ಸಮಿತಿ ಪದಾಧಿಕಾರಿಗಳು ಸೋಮವಾರ ನಗರದ ರೈತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ವರ್ತಕ ತಿಮ್ಮೇಶ್ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಅಧಿಕಾರಿಗಳಿಂದ ಹತ್ತು ಮಳಿಗೆಗಳು ನ್ಯಾಯ ಬದ್ದವಾಗಿ ರೈತ ಭವನದ ಆವರಣದಲ್ಲಿ ಮಂಜೂರಾಗಿದ್ದವು. ಆದರೆ, ಮಂಜೂರಾದ ಸ್ಥಳದ ಎದುಗಡೆ ಅಂಗಡಿಯವರು ಅವರ ವ್ಯಾಪಾರಕ್ಕೆ ಸ್ಪರ್ಧೆ ಉಂಟಾಗಿ ತೊಂದರೆಯಾಗುತ್ತದೆ ಎಂದು ರೈತ ಸಂಘಟನೆಗಳ ಮೂಲಕ ಮಂಜೂರಾದ ನಿವೇಶನ ರದ್ದು ಪಡಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದರು.
ಈ ವೇಳೆ ಸಮಿತಿಯ ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಹನುಮಂತನಾಯ್ಕ್, ಚಂದ್ರಶೇಖರ್, ಸವಿತಾ, ನೀಲಮ್ಮ, ಶಾಂತಮ್ಮ ಮತ್ತಿತರರಿದ್ದರು.