ಮಾಂಟೆಸೊರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ಮಾಂಟೆಸೊರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ದಾವಣಗೆರೆ, ಮಾ. 6 – ಮಾಂಟೆಸೊರಿ ಕಾನ್ವೆಂಟ್ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳಿಂದ  ನಡೆದ ವಸ್ತುಪ್ರದರ್ಶನವನ್ನು ಪಾರಂಪರಿಕ ವೈದ್ಯೆ ಹಾಗೂ ಕದಳಿ ಮಹಿಳಾ ವೇದಿಕೆಯ ಶ್ರೀಮತಿ ಮಮತಾ ನಾಗರಾಜ್ ಉದ್ಘಾಟಿಸಿದರು.

ನಂತರ ನೀಡಿದ ದತ್ತಿ ಉಪನ್ಯಾಸದಲ್ಲಿ `ಮಕ್ಕಳ ನೈತಿಕ ಶಿಕ್ಷಣದ ಅಗತ್ಯತೆ ‘ ವಿಷಯ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪ. ನಿರ್ದೇಶಕ ಎಂ. ಷಡಕ್ಷರಪ್ಪ ರಸಪ್ರಶ್ನೆ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶೈಕ್ಷಣಿಕ ಸಲಹೆಗಾರ  ಎಂ.ಎನ್. ಅಮಿತ್  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಆಡಳಿತಾಧಿಕಾರಿ ಶ್ರೀಮತಿ ಮಲ್ಲಮ್ಮ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕ ಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯ ಕ್ರಮ ನಡೆದವು. ಶಿಕ್ಷಕಿ ಪ್ರಿಯಾಂಕ ಕಾರ್ಯಕ್ರಮ  ನಿರೂಪಿಸಿದರು.

error: Content is protected !!