ಚಳ್ಳಕೆರೆ, ಫೆ. 14- ಇಲ್ಲಿನ ಮೀರಸಾಬಿಹಳ್ಳಿ ಆರೋಗ್ಯ ಕೇಂದ್ರ ಮತ್ತು ಪಿಡಪನಕುಂಟೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಸ್ಪರ್ಶ್ ಕುಷ್ಟರೋಗ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಎನ್. ನವೀನ್ಕುಮಾರ್ ಮಾತನಾಡಿ, ಕುಷ್ಟರೋಗದ ಬಗ್ಗೆ ಭಯಬೇಡ, ಎಚ್ಚರಿಕೆ ಇರಲಿ ಎಂದು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಸ್ನೇಹ, ಮಂಜುಳಾ, ಪ್ರಕಾಶ್, ಮಧು ಕರಿಯಣ್ಣ, ಮಧುರ, ಬಿಂದು ಮತ್ತು ಇತರರು ಉಪಸ್ಥಿತರಿದ್ದರು.
January 19, 2025