ದಾವಣಗೆರೆ,ಫೆ.10- ಗುಲ್ಬರ್ಗಾದಲ್ಲಿ ಈಚೆಗೆ ಆಯೋಜಿಸಲಾಗಿದ್ದ 30ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳಾದ ಅನಘ ಟಿ.ಆರ್ ಹಾಗೂ ಪ್ರಸಾದ್ ಆರ್. ಪೂಜಾರ್ ಅವರು `ಒಣ ಭೂಮಿ ಪರಿಸರದಲ್ಲಿ ಗೆದ್ದಲುಗಳ ಪಾತ್ರ’ ಎಂಬ ವಿಷಯವನ್ನು ಮಂಡಿಸುವುದರ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜನವರಿ 27 ರಿಂದ 31ರವರೆಗೆ ಗುಜರಾತ್ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕಾರ್ಯಾಗಾರಕ್ಕೆ ಆಯ್ಕೆಯಾಗಿರುವ ಶಾಲಾ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶನ ನೀಡಿದ ಶಿಕ್ಷಕಿಯರಾದ ಶ್ರೀಮತಿ ಪ್ರೇಮಾ ಸಿ.ಎಂ, ಕು.ವಿದ್ಯಾ ಹೆಚ್. ಬಿ. ಇವರನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ಪರಿಸರ ಸ್ನೇಹಿ ಗೆದ್ದಲುಗಳ ಬಗ್ಗೆ ತಿಳಿಯಲು ಟಿಕೆವಿಕೆಯ ಹಿರಿಯ ವಿಜ್ಞಾನಿ ಡಾ. ಟಿ.ಜಿ. ಅವಿನಾಶ್, ಯೋಜನೆ ಮತ್ತು ಅದರ ಅನುಷ್ಠಾನದ ಬಗ್ಗೆ ಮಾರ್ಗ ದರ್ಶನ ಪಡೆಯಲು ಟಿಕೆವಿಕೆ ಮುಖ್ಯಸ್ಥ ಡಾ. ಟಿ. ಎನ್. ದೇವರಾಜ್ ಅವರನ್ನು ಶಾಲೆಯ ವಿದ್ಯಾರ್ಥಿಗಳು ಸಂಪರ್ಕಿಸಿ ಹೆಚ್ಚಿನ ವಿಷಯ ಕಲೆ ಹಾಕಿದ್ದರು.