ಹರಿಹರ, ಜ.31- ನಗರದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಎಸ್. ರಾಮಪ್ಪ ಚಾಲನೆ ನೀಡಿದರು. ಈ ವೇಳೆ ತಾಲ್ಲೂಕಿನ 797 ರೈತರು ನೋಂದಣಿ ಮಾಡಿಸಿದ್ದು, 14872 ಕ್ವಿಂಟಾಲ್ ಅವಕವಾಗಲಿದೆ. ಪ್ರತಿ ಕ್ವಿಂಟಾಲ್ ರಾಗಿಗೆ 3578 ರೂ.ಗಳನ್ನು ಸರ್ಕಾರ ನಿಗದಿಪಡಿಸಿರುತ್ತದೆ. ದಿನಾಂಕ 31.3.2023ರವರೆಗೆ ಕಾಲಾವಕಾಶವನ್ನು ರೈತರಿಗೆ ಕಲ್ಪಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಬಿ. ಅಶ್ವತ್ಥ್, ರೈತ ಮುಖಂಡರು, ನಗರಸಭೆ ಸದಸ್ಯರು ಹಾಜರಿದ್ದರು.
January 19, 2025