ರಾಣೇಬೆನ್ನೂರು, ಆ.25- ಇಂದಿನ ದಿನಗಳಲ್ಲಿ ಕೊರೊನಾ ಜೊತೆಯಾಗಿ ಬದುಕುತ್ತಾ ಆರ್ಥಿಕ ಚಟುವಟಿಕೆ ಗಳಿಗೆ ಪುನಶ್ಚೇತನ ನೀಡುವುದು ಅತ್ಯವಶ್ಯಕವಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ಸಂತೋಷ ಪಾಟೀಲ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸ್ಥಳೀಯ ಶಾಸಕ ಅರುಣ್ಕುಮಾರ್ ಪೂಜಾರ್ ಅವರ ಜನ್ಮ ದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ ಕೊರೊನಾ ವಾರಿಯರ್ಸ್ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊರೊನಾ ತಡೆಗಟ್ಟುವಲ್ಲಿ ತಮ್ಮ ಜೀವದ ಹಂಗು ತೊರೆದು ಪ್ರಾಮಾಣಿಕವಾಗಿ ಹೋರಾಡುತ್ತಿರುವ ವಾರಿಯರ್ಸ್ ಬಗ್ಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಮನೆಯಿಂದ ಹೊರಕ್ಕೆ ತೆರಳುವಾಗ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.
ಶಾಸಕ ಅರುಣ್ಕುಮಾರ್ ಪೂಜಾರ್, ಜಿ.ಪಂ ಸದಸ್ಯರಾದ ಮಂಗಳಗೌರಿ ಪೂಜಾರ್, ಮಂಜುನಾಥ್ ಓಲೇಕಾರ್, ಬಸವರಾಜ್ ಕೇಲಗಾರ್, ತಾ.ಪಂ ಇಒ ಎಸ್.ಎಂ.ಕಾಂಬಳೆ ಮತ್ತಿತರರಿದ್ದರು.