ದಾವಣಗೆರೆ, ಆ.12- ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ವರದಿಗಾರರ ಕೂಟದಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೂಟದ ಅಧ್ಯಕ್ಷ ಜಿಎಂಆರ್ ಆರಾಧ್ಯ ಮಾತನಾಡಿ, ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆಯ ವರದಿಗೆ ತೆರಳಿಗೆ ವಾಹಿನಿಗಳ ವರದಿಗಾರು ಮತ್ತು ಇತರ ಆರು ಜನರ ಮೇಲೆ ದುಷ್ಕ್ರರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕ್ಯಾಮರಾ ಧ್ವಂಸಗೊಳಿಸಿದ್ದಾರೆ. ಇದು ಮಾಧ್ಯಮದವರ ವಿರುದ್ಧ ನಡೆದ ಕ್ಷಮಿಸಲಾರದ ಅಕ್ಷಮ್ಯ ಅಪರಾಧ ಮತ್ತು ಅಭಿವ್ಯಕ್ತ ಸ್ವಾತಂತ್ರದ ಮೇಲೆ ನಡೆದ ಅಮಾನುಷ ಕೃತ್ಯ ಎಂದು ಆಕ್ಷೇಪಿಸಿದರು. ಸರಕಾರ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ, ಹಿರಿಯ ಪತ್ರಕರ್ತರಾದ ಬಿ.ಎನ್.ಮಲ್ಲೇಶ್, ಕೆ.ಏಕಾಂತಪ್ಪ, ಬಸವರಾಜ್ ದೊಡ್ಡ ಮನಿ, ನಂದಕುಮಾರ್, ವರದರಾಜ್, ಜೆ.ಎಸ್.ವೀರೇಶ್, ಎಚ್ಎಂಪಿ ಕುಮಾರ್, ಪುನೀತ್, ಲೋಕೇಶ್, ಗಣೇಶ್ ಕಮಲಾಪುರ, ಪರಮೇಶ ಕುಂದೂರು, ಯೋಗರಾಜ್, ಜಯಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.