ಜ್ಞಾನವನ್ನು ವೃದ್ಧಿಪಡಿಸಿಕೊಂಡರೆ ವೃತ್ತಿಯಲ್ಲಿ ಜಯಸಾಧಿಸಲು ಸಾಧ್ಯ

ಹರಪನಹಳ್ಳಿಯ ಸಿವಿಲ್ ಹಿರಿಯ ನ್ಯಾಯಾಧೀಶರಾದ ಎಂ. ಭಾರತಿ ಪ್ರತಿಪಾದನೆ

ಹರಪನಹಳ್ಳಿ, ಡಿ.3- ಹಣ, ಅಧಿಕಾರ ಕ್ಕಿಂತ  ವಕೀಲರು ಜ್ಞಾನವನ್ನು ವೃದ್ಧಿಪಡಿಸಿ ಕೊಂಡರೆ ವೃತ್ತಿಯಲ್ಲಿ ಜಯ ಸಾಧಿಸಲು ಸಾಧ್ಯ ಎಂದು ಸಿವಿಲ್ ಹಿರಿಯ ನ್ಯಾಯಾ ಧೀಶರಾದ ಎಂ. ಭಾರತಿ ಪ್ರತಿಪಾದಿಸಿದ್ದಾರೆ.

ಪಟ್ಟಣದ ವಕೀಲರ ಸಂಘದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ  ಇಂದು ನಡೆದ ವಕೀಲರ  ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಾಬು ರಾಜೇಂದ್ರ ಪ್ರಸಾದ್ ಜನ್ಮ ದಿನಾಚರಣೆ ಅಂಗವಾಗಿ  ವಕೀಲರ ದಿನಾಚರಣೆ ಆರಂಭವಾಯಿತು. ಅವರ ಸ್ಫೂರ್ತಿ ಎಲ್ಲರಿಗೂ ಇರಬೇಕು. ನ್ಯಾಯ, ನೀತಿ, ಧರ್ಮವನ್ನು ಕಾಪಾಡುವವರು ವಕೀಲರು ಮತ್ತು ನ್ಯಾಯಾಧೀಶರು. ನಂಬಿದ ಕಕ್ಷಿದಾರನಿಗೆ ಅನ್ಯಾಯವಾಗದ ರೀತಿಯಲ್ಲಿ  ನ್ಯಾಯ ಕೊಡಿಸಬೇಕು.  ಪವಿತ್ರವಾದ ವೃತ್ತಿಯನ್ನು ಪ್ರತಿಯೊಬ್ಬರು ರಕ್ಷಣೆ ಮಾಡಬೇಕು. ಕರಿಕೋಟ್ ಧೈರ್ಯದ ಸಂಕೇತವಾದರೆ ಬಿಳಿ ಅಂಗಿ ಶಾಂತಿ ಕಾಪಾಡುವ ಸಂಕೇತವಾಗಿದೆ. ವಕೀಲರಿಗೆ ಬೆಟ್ಟದಷ್ಟು  ಸಹನೆ.  ಹೆಚ್ಚಿನ ಸಮಯ ಅಭ್ಯಾಸ ಮಾಡುವುದರಲ್ಲಿ  ನಿರತರಾಗಿರಬೇಕು. ವೃತ್ತಿಯಲ್ಲಿ ಸಾಧನೆ ಮಾಡುವರು ಜ್ಞಾನ ಹಾಗೂ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕಿರಿಯ ವಕೀಲರು ಹಿರಿಯ ವಕೀಲರಿಗೆ ಗೌರವ ಕೋಡಬೇಕು. ಹೆಣ್ಣು ಮಕ್ಕಳಿಗೂ ಕೂಡ ಗಂಡಿನಷ್ಟೇ ಹಕ್ಕು ಇದೆ ಎಂಬುದನ್ನು ನಾವು ತಿಳಿಸಬೇಕು ಎಂದು ಕರೆ ನೀಡಿದರು.

ಸಿವಿಲ್ ಕಿರಿಯ ನ್ಯಾಯಾಧೀಶರಾದ ಪಕ್ಕೀರವ್ವ ಕೆಳಗೆರೆ ಮಾತನಾಡಿ,  ವಕೀಲರ ವೃತ್ತಿ ದೇಶದ ಅಭಿವೃದ್ಧಿಗೆ ಪೂರಕವಾಗಿದೆ.  ಕಿರಿಯ ವಕೀಲರು ದಿನ ಪೂರ್ತಿ ನ್ಯಾಯಾಲಯದಲ್ಲಿ ಇದ್ದು ತಿಳಿದುಕೊಳ್ಳ ಬೇಕು. ಹಿರಿಯ ವಕೀಲರ ಸಲಹೆ, ಸಹಕಾರ ತೆಗೆದು ಕೊಳ್ಳಬೇಕು. ಹಣದ ಹಿಂದೆ ಓಡುವುದಕ್ಕಿಂತ ಜ್ಞಾನ ಸಂಪಾದನೆಗೆ ಹೆಚ್ಚು  ಒತ್ತು ನೀಡಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಚಂದ್ರೇಗೌಡ ಮಾತನಾಡಿ, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಹರಪನಹಳ್ಳಿಗೆ ಎಡಿಜೆ ನ್ಯಾಯಾಲಯ ಮಂಜೂರು ಆಗಿದೆ. ಈ ಹಿಂದೆ ಇದ್ದ ನ್ಯಾಯಾಲಯವನ್ನು ಸ್ವಚ್ಚ ಮಾಡಿ ಕೊಡಿಸ ಬೇಕು. ಉಭಯ ನ್ಯಾಯಾಧೀಶರು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ನಿರ್ದೇಶನ ನೀಡಬೇಕು ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರ್ಮಲ, ವಕೀಲರ ಸಂಘದ ಕಾರ್ಯದರ್ಶಿ ಬಸವರಾಜ, ವಕೀಲರುಗಳಾದ ಗಂಗಾಧರ ಗುರುಮಠ, ಎಸ್. ಎಂ. ರುದ್ರಮುನಿಸ್ವಾಮಿ, ರಾಮನಗೌಡ ಪಾಟೀಲ್, ಕೆ.ಬಸವರಾಜ್, ಕೋಡಿಹಳ್ಳಿ ಪ್ರಕಾಶ್, ಕೆ. ಚಂದ್ರಮೌಳಿ, ಜಿ.ಎಸ್.ಎಂ. ಕೊಟ್ರಯ್ಯ, ಬಂಡ್ರಿ ಗೋಣಿಬಸಪ್ಪ, ರಾಮ್‍ ಭಟ್, ಕೆ.ಉಚ್ಚೆಂಗೆಪ್ಪ, ಮೃತ್ಯುಂಜಯ, ರೇವಣಸಿದ್ದಪ್ಪ, ವಾಮದೇವ, ಬೇಲೂರು ಸಿದ್ದೇಶ, ವೈ.ಟಿ. ಕೊಟ್ರೇಶ, ಜೆ. ಸೀಮಾ, ಕೆ.ದ್ರಾಕ್ಷಾಯಣಮ್ಮ, ರೇಣುಕಾ ಮೇಟಿ, ಬಾಗಳಿ ಮಂಜುನಾಥ್, ಡಿ. ಹನುಮಂತಪ್ಪ, ಉಚ್ಚಂಗಿ ದುರ್ಗದ ನಾಗೇಂದ್ರಪ್ಪ, ತಿರುಪತಿ, ಪುಣಭಘಟ್ಟಿ ನಿಂಗಪ್ಪ, ಜಿಟ್ಟಿನಕಟ್ಟಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.

error: Content is protected !!