ಮಲೇಬೆನ್ನೂರು, ನ.21- ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ನೀರಸ ಮತದಾನ ನಡೆಯಿತು. 687 ಮತದಾರರ ಪೈಕಿ 303 ಮತದಾರರು ಮಾತ್ರ ಮತದಾನ ಮಾಡಿದ್ದಾರೆ.
ಹಿರಿಯ ಮುಖಂಡ ಹೊಳೆಸಿರಿಗೆರೆ ನಾಗನಗೌಡ್ರು, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ. ವಾಗೀಶ್‌ಸ್ವಾಮಿ, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಅನಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಂಡೇರ ತಿಮ್ಮಣ್ಣ, ತಾ, ಗ್ರಾ. ಬಿಜೆಪಿ ಮಾಜಿ ಅಧ್ಯಕ್ಷ ಕೆ.ಹೆಚ್. ನಾಗನಗೌಡ, ಶಿವ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ.ಆರ್. ಚಂದ್ರಶೇಖರ್, ತಾ. ಪ್ರಾ. ಶಾ. ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣಕುಮಾರ್ ಹೆಗಡೆ, ಸಾಹಿತಿ ಕುಂದೂರು ಮಂಜಪ್ಪ, ಮಲೇಬೆನ್ನೂರು ಪಿಎಸಿಎಸ್ ಅಧ್ಯಕ್ಷ ಪಿ.ಆರ್. ಕುಮಾರ್, ಕಮಲಾಪುರದ ಮಹಾಂತೇಶ್, ದಿಶಾ ಸಮಿತಿ ಸದಸ್ಯ ಐರಣಿ ಅಣ್ಣಪ್ಪ, ಕನ್ನಡ ಸಂಘದ ಜ್ಯೋತಿ ನಾಗಭೂಷಣ್, ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್, ಪುರಸಭೆ ಮಾಜಿ ಸದಸ್ಯ ಎ. ಆರೀಫ್ ಅಲಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಓ.ಜಿ. ರುದ್ರಗೌಡ್ರು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಪಿ.ಹೆಚ್. ಶಿವಕುಮಾರ್, ಮೆಡಿಕಲ್ ಷಾಪ್‌ನ ಎನ್.ಕೆ. ರಾಜೀವ್, ಪತ್ರಕರ್ತರಾದ ಜಿಗಳಿ ಪ್ರಕಾಶ್, ವಾಸವಿ ರಮೇಶ್, ಸದಾನಂದ್ ಮತ್ತು ಇತರರು ಮತದಾನ ಮಾಡಿದರು.
ಚುನಾವಣೆ ನಂತರ ನಡೆದ ಮತ ಎಣಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ. ವಾಮದೇವಪ್ಪ ಅವರಿಗೆ 260 ಮತ್ತು ಶಿವಕುಮಾರ್ ಕುರ್ಕಿಗೆ 39 ಮತಗಳು ಲಭಿಸಿದವು. 4 ಮತಗಳು ತಿರಸ್ಕೃತವಾಗಿವೆ.
ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೇಖರಗೌಡ ಮಾಲಿ ಪಾಟೀಲ್‌ಗೆ 180, ಮಹೇಶ್ ಜೋಷಿಗೆ 67, ರಾಜಶೇಖರ್ ಮುಲಾಲಿಗೆ 14 ಮತಗಳು ಲಭಿಸಿವೆ.
ಮತಗಟ್ಟೆ ಅಧಿಕಾರಿಯಾಗಿ ಉಪ ತಹಶೀಲ್ದಾರ್ ಆರ್. ರವಿ, ಸಹಾಯಕ ಅಧಿಕಾರಿ ಮಾಗಿ ಹನುಮಗೌಡ ಗ್ರಾಮ ಲೆಕ್ಕಾಧಿಕಾರಿ ದೇವರಾಜ್, ಮತಗಟ್ಟೆ ಅಧಿಕಾರಿಗಳಾದ ಗ್ರಾಮ ಲೆಕ್ಕಾಧಿಕಾರಿಗಳಾದ ಅಣ್ಣಪ್ಪ ಸುಭಾನಿ, ಕೊಟ್ರೇಶ್ ಕಾರ್ಯ ನಿರ್ವಹಿಸಿದರು.