ರಾಣೇಬೆನ್ನೂರು, ಆ.10- ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಾಜ್ಯ ಸರ್ಕಾರ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಅನುದಾನ ನೀಡಿ, ಕಾಮಗಾರಿಗಳನ್ನು ಮಾಡಲು ಅನುಕೂಲ ಮಾಡಿಕೊಟ್ಟಿದೆ. ಆದ್ದರಿಂದ ಪ್ರತಿಯೊಬ್ಬರೂ ಮುಂದಿನ ದಿನಗಳಲ್ಲೂ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ನೂತನ ಗೋದಾಮು ನಿರ್ಮಾಣ ಹಾಗೂ ಖಂಡೇ ರಾಯನಹಳ್ಳಿ, ಹೂಲಿಕಟ್ಟಿ, ನದಿಹರಳಹಳ್ಳಿ, ಮಾಗೋಡ, ಚಿಕ್ಕಮಾಗನೂರ, ಗೋಡಿಹಾಳ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಯಡಿ ಮನೆ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರೈತರ ಕೃಷಿ ಉತ್ಪನ್ನ ಸಂಗ್ರಹಿಸಿಡಲು ಗೋದಾಮು ನಿರ್ಮಾಣ, ತಾಲ್ಲೂಕಿನ ರೈತರ ಅನುಕೂಲಕ್ಕಾಗಿ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನ ದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ, 40 ಸಾವಿರ ಹೆಕ್ಟೇರ್ ಪ್ರದೇಶವನ್ನು ಹನಿ ನೀರಾವರಿ ಮಾಡುವ ಯೋಚನೆಯಿದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಎಸ್.ಎಸ್. ರಾಮಲಿಂಗಣ್ಣನವರ, ಎಪಿಎಂಸಿ ಸದಸ್ಯ ರಾಜೇಂದ್ರ ಬಸೇನಾಯ್ಕರ, ಪ್ರಮುಖರಾದ ಕರಿಯಪ್ಪ ತೋಟಗೇರ, ಚೋಳಪ್ಪ ಕಸವಾಳ, ಶೇಖರಯ್ಯ ಮಠದ, ಮಮತಾ ಕಮದೋಡ, ನೇತ್ರಾ ಉಕ್ಕುಂದ, ಫಕ್ಕೀರಗೌಡ ರಾಮಲಿಂಗಣ್ಣನವರ, ಸುಭಾಸಗೌಡ ಕರೇಗೌಡ್ರ, ಎಸ್.ಕೆ. ಆನ್ವೇರಿ, ಗುಡ್ಡಪ್ಪ ಬಿದರಿ, ಬಸವರಾಜ ಶಿವಲಿಂಗಪ್ಪನವರ, ಮಾರುತಿ ಗುಡಿಯವರ, ನಾಗಪ್ಪ ಗುಡಿಯವರ ಮತ್ತಿತರರು ಪಾಲ್ಗೊಂಡಿದ್ದರು.