ದಾವಣಗೆರೆ, ಜೂ.22- ಬಸವ ಮಹಿಳಾ ಕೇಂದ್ರದಿಂದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಜನ್ಮ ದಿನದ ಪ್ರಯುಕ್ತ ನಗರದ ದೇವರಾಜ ಅರಸು ಬಡಾವಣೆಯ `ಬಿ’ ಬ್ಲಾಕ್ನಲ್ಲಿ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಪಾಲಿಕೆಯ ಸದಸ್ಯ ವಿನಾಯಕ ಪೈಲ್ವಾನ್ ಅವರು ಸಸಿಗಳನ್ನು ನೆಟ್ಟು ಸಾರ್ವಜನಿಕರಿಗೆ ಆಕ್ಸಿಜನ್ ನೀಡುವ ಗಿಡಗಳನ್ನು ಬೆಳೆಸುವುದರಿಂದ ಮನುಷ್ಯನಲ್ಲಿರುವ ಪರಿಸರವನ್ನು ರಕ್ಷಿಸಿದಂತಾಗುತ್ತದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ ಮಾತನಾಡಿ, ಎಸ್ಸೆಸ್ ಅವರು ಶಾಶ್ವತ ವಾಗಿ ಉಳಿಯುವಂತಹ ಕೆಲಸವನ್ನು ಸಮಾಜಕ್ಕೆ ಮಾಡಿದ್ದಾರೆ. ಅವರು ಒಬ್ಬ ವ್ಯಕ್ತಿ ಅನ್ನುವು ದಕ್ಕಿಂತ ಸಮಾಜದಲ್ಲಿರುವ ದೊಡ್ಡ ಶಕ್ತಿ ಎಂದರು.
ಜನತೆಗೆ ಕೋವಿಡ್ ಉಚಿತ ಲಸಿಕೆಯನ್ನು ನೀಡುವುದರ ಮೂಲಕ ತಮ್ಮ ಕೋಟ್ಯಾಂತರ ರೂ.ಗಳನ್ನು ಎಸ್ಸೆಸ್ ಖರ್ಚು ಮಾಡಿ ದಾನ ಮಾಡಿದ್ದಾರೆ. ಅವರಲ್ಲಿರುವ ಮಾನವೀ ಯತೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ ನ ರೈಲ್ವೆ ಹಳಿಯ ಪಕ್ಕದಲ್ಲಿರುವ ನಿವೇಶನದಲ್ಲಿ ಸುಸಜ್ಜಿತವಾದ ಪಾರ್ಕನ್ನು ನಿರ್ಮಿಸುವಂತೆ ವೀರಪ್ಪ ಬಾವಿ ಅವರು ನಗರ ಪಾಲಿಕೆಯನ್ನು ಒತ್ತಾಯಿಸಿದರು.
ಬಸವ ಮಹಿಳಾ ಕೇಂದ್ರದ ಅಧ್ಯಕ್ಷೆ ಶ್ರೀಮತಿ ವೀಣಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಶ್ರೀಮತಿ ಸುಧಾ, ಶ್ರೀಮತಿ ಗಾಯಿತ್ರಮ್ಮ, ಶ್ರೀಮತಿ ಮಂಗಳ, ಶ್ರೀಮತಿ ಶಾಂತಮ್ಮ, ದ್ಯಾಮಮ್ಮ ಮತ್ತಿತರರು ಉಪಸ್ಥಿತರಿದ್ದರು.