ಹರಿಹರದಲ್ಲಿ ಸುಮತಿ ಜಯಪ್ಪ
ಹರಿಹರ, ಮಾ.16- ಸಮಾಜದಲ್ಲಿನ ಅಂಧ ಕಾರ ಹೋಗಲಾಡಿಸಿ ಅದ್ಭುತವಾದದ್ದನ್ನು ಸೃಷ್ಟಿಸು ವುದರ ಜೊತೆಗೆ ಪುರುಷರಿಗೆ ಸರಿಸಮಾನವಾಗಿ ಅತ್ಯುತ್ತಮ ಕೆಲಸವನ್ನು ಮಾಡುವ ಮೂಲಕ ಸಮಾಜದಲ್ಲಿ ಬೆಳಕನ್ನು ಚೆಲ್ಲುವ ಕೆಲಸವನ್ನು ಮಹಿಳೆಯರು ಮಾಡುತ್ತಾರೆ ಎಂದು ಕುಂಬಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಸುಮತಿ ಜಯಪ್ಪ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಮಹಿಳೆಯರು ಅನೇಕ ರೀತಿಯಲ್ಲಿ ಶೋಷಣೆಗೆ ಒಳಗಾಗುವುದನ್ನು ಕಾಣುತ್ತಿದ್ದೇವೆ. ಆದರೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅಂಜದೆ, ಅಳುಕದೆ ಅದನ್ನು ಎದುರಿಸುವಂತಹ ಮನೋಭಾವನೆ ಬೆಳೆಸಿಕೊಂಡು ಬಾಳಬೇಕು ಎಂದು ಕರೆ ನೀಡಿದರು.
ಹಲವಾರು ವರ್ಷದ ಕೆಳಗೆ ಹೆರಿಗೆ ಮನೆಗೆ ಮತ್ತು ಅಡುಗೆ ಮನೆಗೆ ಸೀಮಿತವಾಗಿ ಮಹಿಳೆ ಯರನ್ನು ಕಾಣುತ್ತಿದ್ದೆವು. ಆದರೆ 12ನೇ ಶತಮಾನ ದಲ್ಲಿ ಬಸವಣ್ಣನವರು ಪುರುಷರು ಮತ್ತು ಮಹಿಳೆ ಯರ ನಡುವಿನ ಅಸಮಾನತೆ ವಿರುದ್ಧ ಹೋರಾಟ ಮಾಡಿ ಸ್ತ್ರೀ ಸಮಾನತೆಯ ಕಡೆ ಬೆಳಕನ್ನು ಚೆಲ್ಲುವ ಕೆಲಸದ ಜೊತೆಗೆ ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಶೋಷಣೆ, ಲಿಂಗ ತಾರತಮ್ಯ ಮುಂತಾದವುಗಳನ್ನು ಹೋಗಲಾಡಿಸಿ ಅಸಮಾನತೆಯಿಂದ ಸಮಾನತೆಯ ಕಡೆಗೆ ತರುವಂತಹ ಕೆಲಸವನ್ನು ಮಾಡಿದರು ಎಂದು ತಿಳಿಸಿದರು.
ಬಿಇಓ ಯು. ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಬದುಕನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲೆ ಇರುತ್ತದೆ. ಶಿಕ್ಷಕ ವೃತ್ತಿಯನ್ನು ಮಾಡುವಾಗ ಯಾವುದೇ ರೀತಿಯ ಅಪಚಾರವಾಗದಂತೆ ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಹೆಜ್ಜೆಗಳನ್ನು ಹಾಕಬೇಕು. ಮಹಿಳೆಯರ ಶಿಕ್ಷಣ ಮತ್ತು ಹಕ್ಕುಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಸಾವಿತ್ರಿ ಬಾಯಿ ಫುಲೆ ಅವರು ಮಹಿಳೆಯರ ಬೆಳವಣಿಗೆಗೆ ದಾರಿ ದೀಪವಾಗಿದ್ದರು ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಎಸ್. ಮುಳ್ಳೂರು ಮಾತನಾಡಿ ಮಗುವಿನಿಂದ ಹಿಡಿದು ಹೆಣ್ಣುಮಕ್ಕಳು ಮಾಡುವಂ ತಹ ಸಾಧನೆಗಳಿಗೆ ಪುರುಷರು ಪ್ರೋತ್ಸಾಹ ನೀಡಿದಾಗ ಅವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಧಿಸಲು ಸಾಧ್ಯವಾಗುತ್ತದೆ. ಸಂಸಾರದಲ್ಲಿ ಹೆಣ್ಣು ಮತ್ತು ಗಂಡು ಎಂಬುದು ಸಮಾನರಾಗಿ ಸಾಗಿದಾಗ ಅಂತಹ ಕುಟುಂಬವು ಸಮಾಜದಲ್ಲಿ ಆರೋಗ್ಯವಂತ ಕುಟುಂಬವಾಗಿ ಸಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಸಾವಿತ್ರಿಬಾಯಿ ಫುಲೆ ಸಂಘದ ಪ್ರಧಾನ ಕಾರ್ಯದರ್ಶಿ ಪುಷ್ಪಾವತಿ ಜಿ.ಎಂ. ಮಾತನಾಡಿ, ಕೊರೊನಾ ಸಮಯದಲ್ಲಿ ತಾಲ್ಲೂಕಿನ ಹಲವಾರು ಗ್ರಾಮಗಳಿಗೆ ತೆರಳಿ ಸಾರ್ವಜನಿಕರಿಗೆ ಆಹಾರ ಕಿಟ್ , ಆರೋಗ್ಯ ತಪಾಸಣೆ ಮುಂತಾದ ಸಮಾಜಮುಖಿ ಕೆಲಸಗಳನ್ನು ಮಾಡಿದೆ. ಈ ವರ್ಷ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಸೇವಾ ತೃಪ್ತಿ ಅಭಿನಂದನಾ ಪ್ರಶಸ್ತಿ ಮತ್ತು ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಹೆಚ್. ಜ್ಯೋತಿ ವಹಿಸಿದ್ದರು.
ಈ ಸಂದರ್ಭದಲ್ಲಿ ಗುರುಬಸಪ್ಪ, ಡಾ. ಹೆಚ್.ಸಿ. ಆಶಿಕಾ, ಡಾ. ಅತಿಯಾ ಕೌಸರ್, ಧಾರವಾಡ ಕಲ್ಪನಾ ಸಿ. ಪದ್ಮ, ಶಾರದಮ್ಮ, ಡಿ. ಜ್ಯೋತಿ, ಎಂ.ಸಿ. ಸುಜಾತ ಗುತ್ತೂರು, ರೇಣುಕಾಂಬ, ಉಮಾದೇವಿ, ಎಸ್. ಸುನೀತಾ, ಸವಿತಾ, ಕೆ. ಪುಷ್ಪಾವತಿ, ರೇಣುಕಮ್ಮ, ಸಾಕಮ್ಮ, ಗಾಯತ್ರಿ, ಗುಲಾಬ್ ಜಾನ್, ರತ್ನವ್ವ ಸಾಲಿಮಠ, ಸುರೇಖಾ, ಜ್ಯೋತಿಲಕ್ಷ್ಮಿ, ಹೆಚ್. ಶಾಂತ, ಶೋಭಾ, ರೂಪ, ಶೈಲಜಾ, ಸವಿತಾ ಇನ್ನಿತರರಿದ್ದರು. ಸಂಧ್ಯಾ ನಿರೂಪಿಸಿದರು. ಹೆಚ್. ಶಾಂತ ಸ್ವಾಗತಿಸಿದರು. ಪ್ರಾರ್ಥನೆ ಚಂದನ ಮತ್ತು ಐಶ್ವರ್ಯ ಪ್ರಾರ್ಥಿಸಿದರು. ಕೆ.ಸಿ. ಗಿರಿಜಾಂಬ, ಮಮತಾ, ಚಂದ್ರಕಲಾ ನಾಗರತ್ನ ನಾಡಗೀತೆ ಹಾಡಿದರು.