ದಾವಣಗೆರೆ, ಮೇ 9- ಲಾಕ್ ಡೌನ್ ಕಾರಣ ಹಸಿವಿನಿಂದ ಬಳಲುತ್ತಿ ರುವ ಅಲೆಮಾರಿ ಕುಟುಂಬಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವಂ ತಾಗಿ ಜೀವನ ಸಂಕಷ್ಟಕ್ಕೆ ಸಿಲುಕಿದೆ.
ನಮಗೆ ದುಡ್ಡು ಬೇಕಾಗಿಲ್ಲ, ಮಕ್ಕಳು ಹಸಿವಿನಿಂದ ಬಳಲುವಂತಾಗಿದ್ದು, ಊಟದ ವ್ಯವಸ್ಥೆ ಮಾಡುವಂತೆ ಅಲೆಮಾರಿ ಕುಟುಂಬಗಳು ಜಿಲ್ಲಾಡಳಿತ, ತಾಲ್ಲೂಕು ಆಡಳಿತಕ್ಕೆ ನಗರದ ಪಿಬಿ ರಸ್ತೆಯ ಜಿಲ್ಲಾಡಳಿತ ಸಮೀಪದ ಕರೂರು ಬಳಿಯ ಅಲೆಮಾರಿ ಕುಟುಂಬ ಮನವಿ ಮಾಡಿದೆ.
100ಕ್ಕೂ ಹೆಚ್ವು ಅಲೆಮಾರಿಗಳು, 50ಕ್ಕೂ ಹೆಚ್ಚು ಮಕ್ಕಳು ಇಲ್ಲಿ ತಾತ್ಕಾಲಿಕವಾಗಿ ಸೂರು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದು ಸೋಪು, ಸರ, ಬಳೆ ಸೇರಿದಂತೆ ಕೆಲ ಜನೋಪಯೋಗಿ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಲಾಕ್‌ಡೌನ್‌ನಿಂದ ವ್ಯಾಪಾರ, ವಹಿವಾಟು ಇಲ್ಲದೇ ಕಳೆದ ಒಂದೂವರೆ ತಿಂಗಳಿನಿಂದ ಒಪ್ಪೊತ್ತಿನ ಊಟಕ್ಕೂ ಸಂಕಷ್ಟ ಪಡುವಂತಾಗಿದೆ.
ಕಳೆದ ಬಾರಿ ಕೂಡ ಆಹಾರವಿಲ್ಲದೆ ಈ ಅಲೆ ಮಾರಿಗಳು ಪರದಾಡುತ್ತಿದ್ದರು. ಈ ಬಾರಿ ಕೂಡ ಊಟವಿಲ್ಲದೆ ಚಿಕ್ಕ ಮಕ್ಕಳು ಪರದಾಡುವಂತಾಗಿದೆ.
ಕಳೆದ 20 ವರ್ಷಗಳಿಂದ ಇಲ್ಲಿ ಜೀವನ ಸಾಗಿಸುತ್ತಿದ್ದೇವೆ. 35 ಜೋ ಪಡಿಗಳಿವೆ. ನಮ್ಮ ಸಹಾಯಕ್ಕೆ ಯಾರೂ ಬರುತ್ತಿಲ್ಲ. ಲಾಕ್‌ಡೌನ್ ಆದ ಮೇಲೆ ನಮ್ಮ ಬದುಕು ಮತ್ತಷ್ಟು ದುಸ್ಥರವಾಗ ಲಿದೆ. ನಮಗೆ ಊಟದ ವ್ಯವಸ್ಥೆ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ಮತ್ತು ತಹಸೀ ಲ್ದಾರ್ ಅವರಿಗೆ ಮನವಿ ಮಾಡಿದರು.
ಸಂಕಷ್ಟಕ್ಕೆ ನೆರವಾದ ಡಿಸಿ: ಸಂಜೆ ಸ್ಥಳಕ್ಕೆ ತಮ್ಮ ತಂಡದೊಂದಿಗೆ ತೆರಳಿದ ಜಿಲ್ಲಾಧಿಕಾರಿ ಬೀಳಗಿ ಅವರು, ಅಲ್ಲಿನ ಅಲೆಮಾರಿ ಕುಟುಂಬ ಗಳ ಸ್ಥಿತಿಗತಿ ಅವಲೋಕಿಸಿದರು. ಎಲ್ಲಾ 35 ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಿಸಿದರು. ಇದು ಖಾಲಿಯಾದಲ್ಲಿ ತಿಳಿಸಿದರೆ ಪುನಃ ಕಿಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ.