ಹರಪನಹಳ್ಳಿಯಲ್ಲಿ ನಿವೃತ್ತ ನ್ಯಾ. ಅರಳಿ ನಾಗರಾಜ್
ಹರಪನಹಳ್ಳಿ, ಮಾ.1- ಇಂದು ಅಪಮೌಲ್ಯಗಳೇ ಮೌಲ್ಯಗಳಾಗಿವೆ, ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯೇತರ ಸಂಸ್ಥೆಯಾಗಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಜಾತಿ ಆಧಾರಿತ ಆಗಬಾರದು. ಈಗ ರಾಜ್ಯ ಘಟಕದ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಹೇಶ ಜೋಷಿ ರಾಜಕೀಯದ ಸೋಂಕು ಇಲ್ಲದ, ಕನ್ನಡದ ಬಗ್ಗೆ ಕಳಕಳಿ ಹೊಂದಿರುವ ವ್ಯಕ್ತಿಯಾಗಿದ್ದಾರೆ, ನಾಯಕತ್ವದ ಗುಣಗಳೂ ಇವೆ. ಗುರು ಗೋವಿಂದ್ ಭಟ್ ಅವರ ಮರಿಮೊಮ್ಮಗ ನಾಗಿರುವ ಮಹೇಶ್ ಜೋಷಿ ಅವರನ್ನು ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಮಹೇಶ್ ಜೋಷಿ ಮಾತನಾಡಿ ನಿವೃತ್ತಿ ನಂತರ ನಾನು ಪುನರ್ ವಸತಿಗಾಗಿ ಅಥವಾ ವಿಸಿಟಿಂಗ್ ಕಾರ್ಡ್ಗಾಗಿ, ಅಧಿಕಾರಕ್ಕಾಗಿ ಸ್ಪರ್ಧಿ ಸಿಲ್ಲ. ಕಸಾಪವನ್ನು ಜನಸಾಮಾನ್ಯರ ಪರಿಷತ್ತಾಗಿ ರೂಪಿಸಲು ಸ್ಪರ್ಧಿಸಿದ್ದೇನೆ ಎಂದು ಅವರು ಹೇಳಿ ದರು. ನಾನು ಎಡ ಅಥವಾ ಬಲ ಪಂಥೀಯನಾಗಿ ಕೆಲಸ ಮಾಡದೇ ಕನ್ನಡ ಪಂಥೀಯನಾಗಿ ಕೆಲಸ ಮಾಡುವೆ ಎಂದು ಅವರು ಹೇಳಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಡಿ. ರಾಮನಮಲಿ ಮಾತನಾಡಿ, ಕಸಾಪ ಸಮ್ಮೇಳನಗಳಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಸಮ್ಮೇಳನಗಳು ಬರಿ ಜಾತ್ರೆಗಳಾಗದೆ ಹೊಸ ಮನ್ವಂತರಕ್ಕೆ ನಾಂದಿಯಾಗಬೇಕು. ಈಗಿರುವ ಆಜೀವ ಸದಸ್ಯತ್ವದ ಶುಲ್ಕವನ್ನು ಕಡಿತಗೊಳಿಸಿ ಮೊದಲಿನಂತೆ 250 ನಿಗದಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಬಿ ಕುಷ್ಟಗಿ, ಕಾರ್ಯ ದರ್ಶಿ ಹೇಮಣ್ಣ ಮೋರಿಗೇರಿ, ಗಂಗಾಧರ, ಕೋಶಾ ಧಿಕಾರಿ ಕೆ. ಉಚ್ಚೆಂಗೆಪ್ಪ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನವರ್, ಕಸಾಪ ಮಾಜಿ ಅಧ್ಯಕ್ಷ ಬಿ. ರಾಮಪ್ರಸಾದ್ ಗಾಂಧಿ, ಎಚ್. ಮಲ್ಲಿಕಾರ್ಜುನ, ಸಾಹಿತಿ ಇಸ್ಮಾಯಿಲ್ ಎಲಿ ಗಾರ, ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ನಿರ್ದೇಶಕ ಬಿ. ನಜೀರ್ ಅಹಮದ್, ಮುಖಂಡ ರಾದ ಚಂದ್ರಶೇಖರ ಪೂಜಾರ, ಕಾನಹಳ್ಳಿ ರುದ್ರಪ್ಪ, ಸತ್ಯನಾರಾಯಣ, ಪ್ರಸನ್ನ ಕುಮಾರ ಜೈನ್, ಲಕ್ಷ್ಮಣ, ಕೃಷ್ಣಮೂರ್ತಿ, ಚಿಕ್ಕಪ್ರಸಾದ್, ಟಿ.ಬಿ. ರಾಜು, ವಿಶ್ವನಾಥ ಸೋಗಿ, ಗೋಲ್ಡನ್ಬೀಡಿ ಜಾವೀದ್, ಮಾಳ್ಗಿ ಮಂಜುನಾಥ, ಸುರೇಂದ್ರಬಾಬು ಇನ್ನಿತರರಿದ್ದರು.