ಪರಮೇಶ್ವರ್ ನಾಯ್ಕ್ ವಿರುದ್ಧದ ಆರೋಪ ಸತ್ಯಕ್ಕೆ ದೂರ

ಹರಪನಹಳ್ಳಿಯಲ್ಲಿ ಶಶಿಧರ್ ಪೂಜಾರ್

ಹರಪನಹಳ್ಳಿ, ಫೆ.26- ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ ಅವರ ವಿರುದ್ಧ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಅಶೋಕ್ ಮಾಡಿರುವ  ಆರೋಪ ಸತ್ಯಕ್ಕೆ ದೂರವಾದುದು ಎಂದು  ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್ ಹೇಳಿದರು.

ಕೇವಲ ಹಡಗಲಿ ಹಾಗೂ ಹರಪನಹಳ್ಳಿ ವಿಧಾನ ಸಭೆಗೆ ಕ್ಷೇತ್ರಕ್ಕೆ ಸೀಮಿತರಲ್ಲ. ಅವರು ರಾಜ್ಯ ಕೆ.ಪಿ.ಸಿ.ಸಿ ವಕ್ತಾರರಾಗಿದ್ದಾರೆ. ಅವರ ಕುರಿತು ಅವರಿಗೆ  ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ  ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು. 

ತಾಲ್ಲೂಕಿನ ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ ಸಂಘಟನೆಯತ್ತ ಹೆಜ್ಜೆ ಹಾಕಲು ಪಿ.ಟಿ.ಪಿ. ಅವರಿಗೆ ಹರಪನಹಳ್ಳಿಯ ಚುನಾವಣೆ ಉಸ್ತುವಾರಿ ದಕ್ಕಿದ ಮೇಲೆ ಕಾಂಗ್ರೆಸ್ ಪಕ್ಷ ತಾಲ್ಲೂ ಕಿನಲ್ಲಿ ಗಟ್ಟಿಯಾಗಿ ಉಳಿದಿದೆ ಎಂದು ಹೇಳಿದರು. 

ಹರಪನಹಳ್ಳಿ ಪುರಸಭೆ ಕಾಂಗ್ರೆಸ್ ಪಕ್ಷ ಬಹುಮತವಿದ್ದರೂ ಕಾಂಗ್ರೆಸ್‍ನ ಕೆಲ ಕಾಣದ ಕೈಗಳಿಂದ ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿ ಗಳಿಂದ ಪುರಸಭೆ ಅಧಿಕಾರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. 

ಮುಂದಿನ ದಿನಗಳಲ್ಲಿ ಹರಪನಹಳ್ಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುರಸಭೆ ಅಧ್ಯಕ್ಷರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ. ಹಾಲೇಶ್ ಮಾತನಾಡಿ, ಎಪಿಎಂಸಿ ಮಾಜಿ ಅಧ್ಯಕ್ಷ  ಅಶೋಕ್ ಮೊದಲ ಬಾರಿಗೆ ಅಧ್ಯಕ್ಷ ರಾಗಲು ಪಿ.ಟಿ. ಪರಮೇಶ್ವರನಾಯ್ಕ ಅವರ ಕಾಲು ಹಿಡಿದು ಅಧಿಕಾರ ಪಡೆದುಕೊಂಡು ಈಗ ಯಾರದೋ ಪಟ್ಟ ಭದ್ರ ಹಿತಾಸಕ್ತಿಗಳ ಮಾತು ಕೇಳಿಕೊಂಡು ಅವರ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಶಾಸಕರಿಗೆ ಸನ್ಮಾನ ಮಾಡಿದ್ದಾರೆ. 

ಅಶೋಕ್ ಅವರೇ ನಿಮ್ಮ ನಡವಳಿಕೆಯನ್ನು ಇದೇ ರೀತಿ ಮುಂದು ವರೆಸಿದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಿಮ್ಮ ಮನೆ ಮುಂದೆ ಬಂದು ಧರಣಿ ನಡೆಸು ತ್ತೇವೆ. ಕೂಡಲೇ ಶಾಸಕ ಪಿ.ಟಿ. ಪಮೇಶ್ವರ ನಾಯ್ಕ ಅವರ ಕ್ಷಮೆ ಕೇಳಿರಿ ಎಂದರು.

ನೀಲಗುಂದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ. ಪರಶುರಾಮಪ್ಪ ಮಾತನಾಡಿ ಅಶೋಕ್‌ ಅಧಿಕಾರದ ಆಸೆಗಾಗಿ ಯಾರ ಕೈಕಾಲು ಬೇಕಾದರೂ ಹಿಡಿಯುತ್ತಾರೆ. ಎಂದರು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಟಿ. ಬಸವನಗೌಡ, ಮಾತನಾಡಿದರು, 

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುತ್ತಿಗಿ ಜಂಬಣ್ಣ, ಟಿ.ಎ.ಪಿ.ಎ.ಎಂ.ಎಸ್ ಅಧ್ಯಕ್ಷ ಪಿ. ಪ್ರೇಮ್ ಕುಮಾರ್,  ನಿರ್ದೇಶಕರುಗಳಾದ ತಿಮ್ಮನಾಯ್ಕ್, ತಾವರ್ಯಾನಾಯ್ಕ್, ಕೊಟ್ರೇಶ್, ಪುರಸಭೆ ಸದಸ್ಯರಾದ ಜಾಕೀರ್ ಸರ್ಕಾವಸ್, ಭರತೇಶ್,    ಎಪಿಎಂಸಿ ಮಾಜಿ ಅಧ್ಯಕ್ಷ ಚಿಗಟೇರಿ ಜಂಬಣ್ಣ,  ನಿರ್ದೇಶಕ ಚಂದ್ರಶೇಖರಪ್ಪ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಟಿ. ಪ್ರವೀಣ್ ಕುಮಾರ್, ಸಾಮಾಜಿಕ ಜಾಲತಾಣದ ಮಹಂತೇಶ್ ನಾಯ್ಕ್, ಎಸ್. ರಿಯಾಜ್,  ಎನ್. ಮಜೀದ್ ಇನ್ನಿತರರಿದ್ದರು.

error: Content is protected !!