ಕೂಡ್ಲಿಗಿ, ಜು.15- ತಾಲ್ಲೂಕಿನ ಒನಕೆ ಓಬವ್ವನ ತವರೂರು ಗುಡೇಕೋಟೆ ಗ್ರಾಮದಲ್ಲಿ ಹಿರಿಯ ಆಟಗಾರರು ಹಾಗೂ ವಾಲ್ಮೀಕಿ ಕ್ರಿಕೆಟರ್ಸ್ ವತಿಯಿಂದ ಕ್ರಿಕೆಟ್ ಟೂರ್ನಿಮೆಂಟ್ ನಡೆಸಲಾಯಿತು.
ಸಂಡೂರು ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಅಂಗವಿಕಲ ಕ್ರಿಕೆಟ್ ಪಟು ಭಾಗವಹಿಸಿ, ಅದ್ಭುತ ಬೌಲಿಂಗ್ ಮಾಡಿ ಕ್ರೀಡಾ ಸ್ಫೂರ್ತಿ ಮೆರೆದು ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರರಾದರು. ಫೈನಲ್ ತಲುಪಿ ದ್ವಿತೀಯ ಬಹುಮಾನ ಪಡೆದ ವಾಲ್ಮೀಕಿ ಕ್ರಿಕೆಟರ್ ವಿಜಯೋತ್ಸವ ಆಚರಿಸಿತು. ಉಪನ್ಯಾಸಕ ಯೂನುಸ್ ಖಾನ್ ಬಹುಮಾನ ವಿತರಿಸಿದರು.