ಜಗಳೂರು, ಫೆ.14- ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೊಳಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್)ಬಣದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆಗ್ರಹಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇ ಶಿಸಿ ಮಾತನಾಡಿದ ಅವರು, ಮೆಕ್ಕೆ ಜೋಳ ಕ್ವಿಂಟಾಲ್‌ಗೆ ರೂ. 1,750/- ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವೇ ನಿಗದಿ ಪಡಿಸಿ ದರೂ ರೈತರಿಗೆ ಸಿಗುತ್ತಿಲ್ಲ. ಆದ್ದರಿಂದ ಕನಿಷ್ಠ ಬೆಲೆಗಿಂ ತ ಕಡಿಮೆ ಬೆಲೆಗೆ ಖರೀದಿಸು ವವರ ವಿರುದ್ಧ ಎರಡು ವರ್ಷ ದಂಡ ಸಹಿತ ಜೈಲು ಹಾಗೂ ಪರವಾನಿಗೆ ರದ್ದು ಪಡಿಸುವ ಕಾಯ್ದೆ ಜಾರಿಗೊಳಿಸಿದರೆ ರೈತರಿಗೆ ನ್ಯಾಯ ಸಿಗುತ್ತದೆ ಎಂದರು.
ಎಪಿಎಂಸಿ ಕಾಯ್ದೆ ರೈತಪರವಾಗಿದೆ ಎನ್ನುವ ಸರ್ಕಾರದ ಹೇಳಿಕೆಗೆ ಸ್ವಾಗತ. ಆದರೆ ಪ್ರಧಾನಿ ಮೋದಿ ಅವರಿಗೆ ನಮ್ಮ ಪ್ರಶ್ನೆ ಏನೆಂದರೆ ನೇರವಾಗಿ ರೈತರ ಮನೆ ಬಾಗಿಲಿಗೆ ಆಗಮಿಸಿ ಖರೀದಿಸುವ ವರು ವಾಲ್ವಾ, ರಿಲೈಯನ್ಸ್, ಮೋರ್ ನಂತಹ ಬಹುರಾಷ್ಟ್ರೀಯ ಕಂಪನಿ ಮಾಲೀಕರಾಗಿದ್ದಾರೆ. ಇದರಿಂದ ರೈತರ ಉತ್ಪಾದಕ ವಸ್ತುಗಳಿಗೆ ಬೆಲೆ ನಿಗದಿಪಡಿಸಲು ಏಕೆ ಸಾಧ್ಯವಾಗು ತ್ತಿಲ್ಲ. ಅಗತ್ಯ ವಸ್ತುಗಳ ಕಾಯ್ದೆಯಿಂದ ಆಹಾರ ದಾಸ್ತಾನು ಸಂಗ್ರಹಣೆಗೆ ಅವಕಾಶ ಒದಗಿಸಿ ಕಂಪನಿ ಮಾಲೀಕರ ಏಜೆಂಟ್‌ಗಳು ರೈತರೋ ಅಥವಾ ಸರ್ಕಾರವೇ? ಎಂದು ಪ್ರಶ್ನಿಸಿದರು.
ವಿದ್ಯುತ್ ಕಾಯ್ದೆ ಜಾರಿಗೊಳಿಸಿ ರೈತರ ಪಂಪ್ ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆಯಿಂದ ಪ್ರೀಪೇಡ್ ಕರೆನ್ಸಿ ತರಹ ಬಿಲ್ ಪಾವತಿಸಿ ವಿದ್ಯುತ್ ಪಡೆಯಬೇಕು ಎಂಬ ಖಾಸಗೀಕರಣದ ಹುನ್ನಾರ ಕೈಬಿಡಬೇಕು. ಹಿಂದಿನಂತೆ ರೈತರಿಗೆ ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ 80 ದಿನಗಳಿಂದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ನಡೆಯುತ್ತಿರುವ ಹೊರಾಟಕ್ಕೆ ಬೆಂಬಲಿಸಿ, ರಾಜ್ಯದಲ್ಲೂ ಚಳುವಳಿ ತೀವ್ರಗೊಳಿಸಲು ಪೂರ್ವಭಾವಿಯಾಗಿ ಫೆ.19 ರಂದು ದಾವಣಗೆರೆ ಎಪಿಎಂಸಿ ಆವರಣದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ವಿಚಾರ ಸಂಕಿರಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ್, ಹಿರಿಯ ಪತ್ರಕರ್ತ ಶಿವಸುಂದರ್ ಅವರು ಭಾಗವಹಿಸಲಿದ್ದಾರೆ. ತಾಲ್ಲೂಕಿನಿಂದ ಹೆಚ್ಚಿನ ರೈತರು ಪಾಲ್ಗೊಳ್ಳಬೇಕು ಹಾಗೂ ಫೆ.20 ರ ನಂತರ ದೆಹಲಿಗೆ ರೈಲು ಭರೋ ಹೋರಾಟಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಚಿರಂಜೀವಿ ಸಿ.ಎಂ ಹೊಳೆ, ಸತೀಶ್ ಗೌಡಗೊಂಡನಹಳ್ಳಿ, ಶರಣಪ್ಪ, ನಿಂಗಪ್ಪ, ಲೋಕೇಶ್, ನಾಗರಾಜ್, ರಾಜನಹಟ್ಟಿ ರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.